ಮಂಗಳವಾರ, ಜನವರಿ 21, 2020
25 °C

‘ಕಮಲಿ’ ವಂಚನೆ; ಕಮಿಷನರ್‌ಗೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ‘ಕಮಲಿ’ ಧಾರಾವಾಹಿಯ ನಿರ್ದೇಶಕ ಅರವಿಂದ್ ‌ಕೌಶಿಕ್ ನನ್ನಿಂದ ಲಕ್ಷಾಂತರ ರೂಪಾಯಿ ಪಡೆದು ವಾಪಸು ನೀಡದೇ ವಂಚಿಸಿದ್ದಾನೆ’ ಎಂದು ಆರೋಪಿಸಿ ನಿರ್ಮಾಪಕ ರೋಹಿತ್ ಎಂಬುವರು ನಗರ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದಾರೆ.

ಕಮಿಷನರ್ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿರುವ ರೋಹಿತ್, ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

‘ಧಾರಾವಾಹಿ ಆರಂಭಿಸಲು ಹಣ ಹೂಡಿಕೆ ಮಾಡಿದ್ದೆ. 2018ರ ಮೇ 28ರಿಂದ ಧಾರಾವಾಹಿ ಆರಂಭವಾಗಿತ್ತು. 287 ಸಂಚಿಕೆಗಳ ನಂತರ ನನ್ನ ಹೆಸರನ್ನು ಟೈಟಲ್‌ ಕಾರ್ಡ್‌ನಿಂದ ತೆಗೆಯಲಾಗಿದೆ. ರೋಹಿತ್ ಅವರೇ ನಿರ್ಮಾಪಕ ಎಂದು ತೋರಿಸಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಕೌಶಿಕ್ ಯಾವುದೇ ಉತ್ತರ ನೀಡುತ್ತಿಲ್ಲ’ ಎಂದು ರೋಹಿತ್ ದೂರಿದ್ದಾರೆ.  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು