ಆನ್‌ಲೈನ್‌ ಕಂಪನಿ ವಿರುದ್ಧ ಪ್ರಕರಣ ದಾಖಲು

7

ಆನ್‌ಲೈನ್‌ ಕಂಪನಿ ವಿರುದ್ಧ ಪ್ರಕರಣ ದಾಖಲು

Published:
Updated:

ಬೆಂಗಳೂರು: ವೈದ್ಯರ ಸಲಹೆಯ ಚೀಟಿ ಇಲ್ಲದೆ ಆನ್‌ಲೈನ್‌ ಮೂಲಕ ‘ಸುಹಾಗ್ರ’ ಎಂಬ ಆಯುರ್ವೇದ ಉತ್ಪನ್ನ ಮಾರಾಟ ಮಾಡುತ್ತಿದ್ದ ‘ಸ್ನ್ಯಾಪ್‌ಡೀಲ್‌’ ಕಂಪನಿಯ ಸಿಇಒ ವಿರುದ್ಧ ರಾಜ್ಯ ಔಷಧ ನಿಯಂತ್ರಕರು ಬೆಳಗಾವಿಯಲ್ಲಿ ದೂರನ್ನು ದಾಖಲಿಸಿಕೊಂಡಿದ್ದಾರೆ.

ಈ ಔಷಧವು ವಿವರ ಪಟ್ಟಿ (ಷೆಡ್ಯೂಲ್‌) ಎಚ್‌ ಅಡಿ ಬರುತ್ತದೆ. ಇದನ್ನು ವೈದ್ಯರ ಸಲಹೆಯ ಚೀಟಿ ಇಲ್ಲದೆ  ಗ್ರಾಹಕರಿಗೆ ಮಾರಾಟ ಮಾಡುವಂತಿಲ್ಲ. ಆದರೆ, ಸ್ನ್ಯಾಪ್‌ಡೀಲ್‌ ಈ ನಿಯಮ ಉಲ್ಲಂಘಿಸಿ ಮಾರಾಟ ಮಾಡುತ್ತಿತ್ತು ಎಂದು ಕರ್ನಾಟಕ ಔಷಧ ನಿಯಂತ್ರಕ ಇಲಾಖೆ ಅಧಿಕಾರಿಗಳು ‘ತಿಳಿಸಿದರು.

ಷೆಡ್ಯೂಲ್‌ ಎಚ್‌ ಔಷಧದ ಪ್ರದರ್ಶನ, ಮಾರಾಟ ಮತ್ತು ವಿತರಣೆ ಮಾಡಿದ ಕಾರಣ ಈ ಕ್ರಮ ಕೈಗೊಳ್ಳಲಾಗಿದ್ದು, ಆರೋಪ
ಸಾಬೀತಾದರೆ ನಿಯಮ ಉಲ್ಲಂಘನೆಯಡಿ ಮೂರರಿಂದ ಐದು ವರ್ಷ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದರು.

ಸುಹಾಗ್ರ–100 ಲೈಂಗಿಕ ಪ್ರಚೋದಕ ಔಷಧವಾಗಿದೆ. ಪಂಜಾಬ್‌ನ ಲೂಧಿಯಾನದ ಕಂಪನಿಯೊಂದು  ಪರವಾನಗಿ ಇಲ್ಲದೆ  ಔಷಧವನ್ನು ತಯಾರಿಸುತ್ತಿರುವುದನ್ನು ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದರು ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !