ಮಂಗಳವಾರ, ಜನವರಿ 21, 2020
27 °C

ಬಲೆಗೆ ಬಿದ್ದ 65 ಕೆ.ಜಿ ತೂಕದ ‘ಕುರುಡ’ಮೀನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೀರ್ಥಹಳ್ಳಿ: ತಾಲ್ಲೂಕಿನ ಮಂಡಗದ್ದೆ ಸಮೀಪ ತುಂಗಾ ನದಿ ಹಿನ್ನೀರಿನಲ್ಲಿ ಗುರು ವಾರ ಬರೋಬ್ಬರಿ 65 ಕೆ.ಜಿ ತೂಕದ ಮೀನು ಮೀನುಗಾರರ ಬಲೆಗೆ ಬಿದ್ದಿದೆ.

ಮೀನುಗಾರ ಕುಮಾರ್ ಹಾಕಿದ್ದ ಬಲೆ ಎಳೆದಾಗ ಯಾವುದೋ ಮರದ ದಿಮ್ಮಿ ಸಿಕ್ಕಿಕೊಂಡಿರಬೇಕು ಎಂದು ಭಾವಿಸಿದ್ದರು. ಬಹಳ ಪ್ರಯಾಸಪಟ್ಟು ಬಲೆಯನ್ನು ಮೇಲಕ್ಕೆಳೆದಾಗ ಅಚ್ಚರಿ ಕಾದಿತ್ತು. ಅಪರೂಪದ ಬೃಹತ್ ಗಾತ್ರದ ಮೀನು ಬಲೆಗೆ ಬಿದ್ದಿರುವ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತು.

ಸುತ್ತಲಿನ ನೂರಾರು ಮಂದಿ ಮೀನನ್ನು ನೋಡಲು ಬಂದರು. ಹಿರಿಯ ಮೀನುಗಾರರು ಇದನ್ನು ‘ಕುರುಡ’ (ಕುಲ್ಡ) ಮೀನು ಎಂದು ಗುರುತಿಸಿದರು.

ಪ್ರತಿಕ್ರಿಯಿಸಿ (+)