ಭಾನುವಾರ, ನವೆಂಬರ್ 17, 2019
21 °C

ಕಾವೇರಿ ‘ತೀರ್ಥೋದ್ಭವ’ದ ಸಮಯ

Published:
Updated:
Prajavani

ಮಡಿಕೇರಿ: ಜೀವನದಿ ಕಾವೇರಿ ಉಗಮ ಸ್ಥಳವಾದ ತಲಕಾವೇರಿ ಕ್ಷೇತ್ರದಲ್ಲಿ ತೀರ್ಥೋದ್ಭವವು ಗುರುವಾರ ತಡರಾತ್ರಿ 12.59ಕ್ಕೆ ನೆರವೇರಲಿದೆ. ಈ ದೃಶ್ಯ ನೋಡಲು ಕಾವೇರಿ ನಾಡಿನತ್ತ ಭಕ್ತರು ಬರಲು ಆರಂಭಿಸಿದ್ದಾರೆ.

ಕರ್ಕಾಟಕ ಲಗ್ನದಲ್ಲಿ ಪವಿತ್ರ ಬ್ರಹ್ಮಕುಂಡಿಕೆಯಲ್ಲಿ ಕಾವೇರಿಯು ತೀರ್ಥ ರೂಪಿಣಿಯಾಗಿ ಭಕ್ತರಿಗೆಕಾಣಿಸಿಕೊಳ್ಳಲಿದ್ದಾಳೆ. ಭಾಗಮಂಡಲದ ಭಗಂಡೇಶ್ವರನ ದೇಗುಲದಲ್ಲಿ ಅಕ್ಷಯ ಪಾತ್ರೆಗೆ ಅಕ್ಕಿ ಹಾಕುವ ಮೂಲಕ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ.

ಕಾವೇರಿ ಮಾತೆಗೆ ತೊಡಿಸಲು ಚಿನ್ನಾಭರಣಗಳನ್ನು ಭಾಗಮಂಡಲದ ಭಗಂಡೇಶ್ವರನ ದೇವಾಲಯದಿಂದ ಬುಧವಾರ ತಲಕಾವೇರಿಗೆ ಕೊಂಡೊಯ್ಯಲಾಯಿತು.

ಪ್ರತಿಕ್ರಿಯಿಸಿ (+)