ಮಂಗಳವಾರ, ಅಕ್ಟೋಬರ್ 15, 2019
29 °C

ತಾಕತ್ತು ತೋರಿಸಲು ಇದು ಕುಸ್ತಿ ಮೈದಾನ ಅಲ್ಲ: ಸಿ.ಸಿ. ಪಾಟೀಲ

Published:
Updated:

ದಾವಣಗೆರೆ: ‘ಕೇಂದ್ರದಿಂದ ಬರ ಪರಿಹಾರ ಬಂದಾಗ ಯಾರ ತಾಕತ್ತು ಏನೆಂಬುದು ವಿರೋಧ ಪಕ್ಷಗಳಿಗೆ ಅರಿವಾಗಲಿದೆ. ತಾಕತ್ತು ತೋರಿಸಲು ಇದೇನು ಕುಸ್ತಿ ಮೈದಾನ ಅಲ್ಲ’ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ. ಪಾಟೀಲ ವಿರೋಧ‍ ಪ‍ಕ್ಷಗಳಿಗೆ ತಿರುಗೇಟು ನೀಡಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ಅನುದಾನದ ನಿರೀಕ್ಷೆಯಲ್ಲಿ ನಾವಿದ್ದೇವೆ. ರಾಜ್ಯ ಸರ್ಕಾರ ಕೈ ಕಟ್ಟಿ ಕೂತಿಲ್ಲ. ಈಗಾಗಲೇ ಪ್ರವಾಹ ಸಂತ್ರಸ್ತರಿಗೆ ₹ 1,500 ಕೋಟಿ ಪರಿಹಾರ ನೀಡಲಾಗಿದೆ’ ಎಂದು ಪ್ರತಿಕ್ರಿಯಿಸಿದರು.

Post Comments (+)