ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರ ನಿಗ್ರಹಕ್ಕಾಗಿ ಸಿಸಿಬಿಯಲ್ಲಿ ಪ್ರತ್ಯೇಕ ವಿಭಾಗ ರಚನೆ

ಮೂರು ಪ್ರತ್ಯೇಕ ವಿಭಾಗ
Last Updated 5 ನವೆಂಬರ್ 2019, 10:37 IST
ಅಕ್ಷರ ಗಾತ್ರ

ಬೆಂಗಳೂರು: ಭಯೋತ್ಪಾದನೆ ನಿಗ್ರಹ ಘಟಕ (ಎಟಿಸಿ), ಮಾದಕ ವಸ್ತು ವಿರೋಧಿ ವಿಭಾಗ ಮತ್ತು ಮಹಿಳಾ ರಕ್ಷಣಾ ವಿಭಾಗ ಎಂಬ ಮೂರು ಪ್ರತ್ಯೇಕ ವಿಭಾಗಗಳನ್ನು ಸೇರಿಸಿ ಕೇಂದ್ರ ಅಪರಾಧ ದಳವನ್ನು (ಸಿಸಿಬಿ) ಪುನರ್ ರಚಿಸಲಾಗಿದೆ.

ಉಗ್ರವಾದಿ ಚಟುವಟಿಕೆ ಮೇಲೆ ನಿಗಾ, ಮಾದಕ ವಸ್ತುಗಳ ಜಾಲ ನಿಯಂತ್ರಣ ಹಾಗೂ ಮಹಿಳೆಯರಿಗೆ ರಕ್ಷಣೆ ನೀಡಬೇಕಿರುವುದು ಮುಖ್ಯ ಎಂಬ ಕಾರಣಕ್ಕೆ ಹೊಸತಾಗಿ ಈ ಮೂರು ವಿಭಾಗಗಳನ್ನು ರಚಿಸಲಾಗಿದೆ ಎಂದು ಸಿಸಿಬಿ ಹೆಚ್ಚುವರಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದ್ದಾರೆ.

ಬೆಂಗಳೂರು ನಗರ ವ್ಯಾಪ್ತಿಯನ್ನು ಕೇಂದ್ರೀಕರಿಸಿ ಈ ವಿಭಾಗಗಳು ಕಾರ್ಯನಿರ್ವಹಿಸಲಿವೆ. ಅವುಗಳಿಗೆ ಪ್ರತ್ಯೇಕ ಕಾರ್ಯ (ಟಾಸ್ಕ್) ನೀಡಲಾಗುವುದು. ಆ ಟಾಸ್ಕ್ ಯಾವುದೆಂದು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗದು. ಈ ವಿಭಾಗಗಳ ನೇತೃತ್ವವನ್ನು ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ದರ್ಜೆಯ ಅಧಿಕಾರಿಗಳು ವಹಿಸಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಸದ್ಯ ಮಾದಕ ವಸ್ತು ಮತ್ತು ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳನ್ನು ಒಂದೇ ವಿಭಾಗ ನೋಡಿಕೊಳ್ಳುತ್ತಿದೆ. ಇನ್ನು ಮುಂದೆ ಈ ಘಟಕ ಮಾದಕ ವಸ್ತುಗಳಿಗೆ ಸಂಬಂಧಿಸಿದ ಅಪರಾಧ ಚಟುವಟಿಕೆ ಮೇಲೆ ಮಾತ್ರ ನಿಗಾ ವಹಿಸಲಿದೆ. ಮಹಿಳೆಯರ ರಕ್ಷಣೆಗೆ ಪ್ರತ್ಯೇಕ ವಿಭಾಗ ರಚಿಸಲಾಗುವುದು ಎಂದೂ ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT