ಬುಧವಾರ, ಅಕ್ಟೋಬರ್ 16, 2019
21 °C

ಅಪಘಾತ: ಸಿಸಿಬಿ ಪೊಲೀಸರ ಜೀಪು ಜಖಂ

Published:
Updated:
ಅಪಘಾತದಲ್ಲಿ ಜಖಂಗೊಂಡ ಸಿಸಿಬಿಯ ಜೀಪು

ಬೆಂಗಳೂರು: ಯಲಹಂಕ ಬಳಿಯ ಭಾರತೀಯ ವಾಯುನೆಲೆ ಸಮೀಪ ಶುಕ್ರವಾರ ರಾತ್ರಿ 11.30ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಸಿಸಿಬಿ ಪೊಲೀಸರ ಜೀಪು ಜಖಂಗೊಂಡಿದೆ.

‘ಸರ್ವೀಸ್‌ ರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸುವಾಗ ಚಾಲಕ ಕುಮಾರಸ್ವಾಮಿ ನಿರ್ಲಕ್ಷ್ಯದಿಂದ ಜೀಪು ಚಲಾಯಿಸಿದ್ದರು. ಅದೇ ವೇಳೆ ತೆಲಂಗಾಣ ನೋಂದಣಿ ಸಂಖ್ಯೆಯ ಲಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊರಟಿತ್ತು. ಜೀಪನ್ನು ರಸ್ತೆ ವಿಭಜಕಕ್ಕೆ ಗುದ್ದಿಸಿದ್ದ ಚಾಲಕ, ನಂತರ ಲಾರಿಗೆ ಡಿಕ್ಕಿ ಹೊಡೆಸಿದ್ದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

‘ಸಿಸಿಬಿ ಇನ್‌ಸ್ಪೆಕ್ಟರ್‌ ಕೇಶವ್‌ಮೂರ್ತಿ ಅವರಿಗೆ ಸೇರಿದ್ದ ಜೀಪಿನಲ್ಲಿ ಚಾಲಕ ಕುಮಾರಸ್ವಾಮಿ ಮಾತ್ರ ಇದ್ದ.  ಗಾಯಗೊಂಡ ಅವರನ್ನು ಸ್ಥಳೀಯರೇ ಆಸ್ಪತ್ರೆಗೆ ಕರೆದೊಯ್ದರು. ಅವರು ಮದ್ಯ ಕುಡಿದು ಜೀಪು ಚಲಾಯಿಸಿರಬಹುದೆಂಬ ಅನುಮಾನ ಇದೆ. ಯಲಹಂಕ ಸಂಚಾರ ಪೊಲೀಸರು ಸ್ಥಳಕ್ಕೆ ಬಂದು ಮಾಹಿತಿ ಪಡೆದುಕೊಂಡಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ಅಪಘಾತದಿಂದ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಅಪಘಾತದ ವಾಹನಗಳನ್ನು ತೆರವುಗೊಳಿಸಿದ ನಂತರವೇ ವಾಹನಗಳ ಸಂಚಾರ ಆರಂಭವಾಯಿತು. 

Post Comments (+)