ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರಿಗೆ ಕೊಂಕಣಿ ಸಾಹಿತ್ಯ ಅಕಾಡೆಮಿಯ ವಿಶೇಷ ಗೌರವ ಪುರಸ್ಕಾರ

Last Updated 9 ಫೆಬ್ರುವರಿ 2018, 13:59 IST
ಅಕ್ಷರ ಗಾತ್ರ

ಧಾರವಾಡ: ಕೊಂಕಣಿ ಮಾನ್ಯತಾ ಬೆಳ್ಳಿಹಬ್ಬ ವರ್ಷಾಚರಣೆ ಅಂಗವಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ನೀಡುವ ಕೊಂಕಣಿ ವಿಶೇಷ ಗೌರವ ಪುರಸ್ಕಾರ ಉತ್ತರ ಕರ್ನಾಟಕದ ಮೂವರಿಗೆ ಲಭಿಸಿದೆ.

ಸಂಗೀತ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಧಾರವಾಡದ ಹಿರಿಯ ಕೊಂಕಣಿ ಸಾಹಿತಿ ಚಿತ್ರಾ ದುರ್ಗಾದಾಸ ಶಿರಾಲಿ ಹಾಗೂ ಹುಬ್ಬಳ್ಳಿಯ ಉದಯೋನ್ಮುಖ ಯುವ ಕಲಾವಿದೆ ಆಮೋದಿನಿ ವಾಸುದೇವ ಮಹಾಲೆ ಮತ್ತು ಪತ್ರಿಕಾ ಕ್ಷೇತ್ರದಲ್ಲಿ ಬೆಳಗಾವಿಯ ಪತ್ರಕರ್ತ ವಿವೇಕ ಮಹಾಲೆಗೆ ಕೊಂಕಣಿ ವಿಶೇಷ ಗೌರವ ಪುರಸ್ಕಾರ ನೀಡಲಾಗುವುದು ಎಂದು ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯ ಸಂತೋಷ ಗಜಾನನ ಮಹಾಲೆ ತಿಳಿಸಿದ್ದಾರೆ.

ಅಮೋದಿನಿ ಮಹಾಲೆ ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಅನೇಕ ಪ್ರಶಸ್ತಿ, ಗೌರವಗಳನ್ನು ಪಡೆದಿದ್ದು ಪ್ರಸ್ತುತ ಹುಬ್ಬಳ್ಳಿಯ ಕೆಎಲ್‍ಇ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಥಮ ಪಿಯುನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಪಂ.ನಾಗನಾಥ ವಡೆಯರ ಅವರ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ ಹಾಗೂ ಪಂ.ಅಶೋಕ ನಾಡಿಗೇರ ಇವರಲ್ಲಿ ಸಂಗೀತಾಭ್ಯಸವನ್ನು ಮಾಡುತ್ತಿದ್ದಾಳೆ.

ಫೆ. 12ರಂದು ದಾಂಡೇಲಿಯಲ್ಲಿ ಜರುಗುವ ದಂಡಕಾರಣ್ಯ ಕೊಂಕಣಿ ಮಾನ್ಯತೋತ್ಸವ-25ದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ ಎಂದು ಗಜಾನನ ಮಹಾಲೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT