ಸೋಮವಾರ, ಸೆಪ್ಟೆಂಬರ್ 21, 2020
27 °C

‘ಮಲೆಯ ಮಕ್ಕಳ ಮಾತಾಯಿ’ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಳಂದೂರು (ಚಾಮರಾಜನಗರ ಜಿಲ್ಲೆ): ‘ಮಲೆಯ ಮಕ್ಕಳ ಮಾತಾಯಿ‌‘ ಎಂದೇ ಹೆಸರಾಗಿದ್ದ, ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಜಡೇ ಜಲ್ಲೆ ಮಾದಮ್ಮ (60) ಮಂಗಳವಾರ ನಿಧನರಾದರು. ಅವರಿಗೆ ಪುತ್ರ, ಪುತ್ರಿ ಇದ್ದಾರೆ.

ಯರಕನಗದ್ದೆ ಪೋಡಿಯಲ್ಲಿ ಜನಿಸಿದ್ದ ಅವರನ್ನು ಸ್ಥಳೀಯರು ‘ಜಡ್ಡೆಮಡಿ‘ ಎಂದು ಕರೆಯುತ್ತಿದ್ದರು. ತಮ್ಮ ತಾಯಿಯ ಮಾರ್ಗದರ್ಶನದಲ್ಲಿ, ಪಾರಂಪರಿಕ ಆರೋಗ್ಯ ಸೇವೆಯನ್ನು ಕಲಿತು ಜನಪ್ರಿಯರಾಗಿದ್ದರು. ಸೂಲಗಿತ್ತಿಯಾದರೂ ಅರಣ್ಯ, ಔಷಧೀಯ ಸಸ್ಯಗಳ ಬಗ್ಗೆ ಅವರಿಗೆ ಮಾಹಿತಿ ಇತ್ತು.

ಸೋಲಿಗರ ಆರೋಗ್ಯಕ್ಕೆ ದುಡಿದಿದ್ದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಜಲ್ಲೇ ಸಿದ್ದಮ್ಮ ಅವರ ಪುತ್ರಿಯಾದ ಮಾದಮ್ಮ, ಗುಡ್ಡಗಾಡಿನ ಎರಡು ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಹೆರಿಗೆ ಮಾಡಿಸಿದ್ದರು. ಆಸ್ಪತ್ರೆಗೆ ತೆರಳದ ಸೋಲಿಗ ಮಹಿಳೆಯರಿಗೆ ಕುಳಿತ ಸ್ಥಿತಿಯಲ್ಲಿಯೇ ಹೆರಿಗೆ ಮಾಡಿಸುವಲ್ಲಿ ನಿಷ್ಣಾತರಾಗಿದ್ದರು.

ಬಿಳಿಗಿರಿರಂಗನಬೆಟ್ಟದ ಮೊದಲ ಮಾವು ದಿಂಬದ ಬಳಿ ಬುಧವಾರ ಮಧ್ಯಾಹ್ನ 12ಕ್ಕೆ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು