ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಲೋಕಸಭಾ ಕ್ಷೇತ್ರ ದರ್ಶನ

Last Updated 3 ಮೇ 2019, 16:28 IST
ಅಕ್ಷರ ಗಾತ್ರ

ಮೀಸಲು ಕ್ಷೇತ್ರವಾದ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌– ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ತಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳು ವ್ಯಾಪ್ತಿಗೆ ಬರುತ್ತವೆ. ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡರೂ, ಇಲ್ಲಿ ಕಾಂಗ್ರೆಸ್ ಕಣಕ್ಕಿಳಿಯಲಿದೆ.ಎರಡು ಬಾರಿ ಗೆದ್ದಿರುವ ಕಾಂಗ್ರೆಸ್‌ನ ಆರ್‌.ಧ್ರುವನಾರಾಯಣ ಈ ಬಾರಿಯೂ ಸ್ಪರ್ಧಿಸಲಿದ್ದಾರೆ.ಬಿಎಸ್‌ಪಿ ಕೂಡ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಹೇಳಿದೆ.

ಬಿಜೆಪಿಯಲ್ಲಿ 10ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದಾರೆ. ಧ್ರುವನಾರಾಯಣ ಅವರನ್ನು ಸೋಲಿಸಬೇಕಾದರೆ, ಶ್ರೀನಿವಾಸ ಪ್ರಸಾದ್‌ ಅವರೇ ಅಭ್ಯರ್ಥಿಯಾಗಬೇಕು ಎಂಬ ನಿಲುವು ಪಕ್ಷದ ಸ್ಥಳೀಯ ನಾಯಕತ್ವದಲ್ಲಿದೆ.

*******

ಆಕಾಂಕ್ಷಿಗಳು

ಕಾಂಗ್ರೆಸ್‌: ಆರ್‌.ಧ್ರುವನಾರಾಯಣ

ಬಿಜೆಪಿ: ಕೆ.ಶಿವರಾಂ, ಕೋಟೆ ಶಿವಣ್ಣ, ಜಿ.ಎ‌ನ್‌.ನಂಜುಂಡಸ್ವಾಮಿ, ಕಾಗಲವಾಡಿ ಶಿವಣ್ಣ, ಎಸ್‌.ಮಹದೇವಯ್ಯ, ಭಾರತಿ ಶಂಕರ್‌, ಆರ್‌.ರಾಜು, ಅರುಣ್‌ ಕುಮಾರ್‌, ಸಿ.ರಮೇಶ್‌, ಡಾ.ಮೋಹನ್‌

ಮತದಾರರ ಸಂಖ್ಯೆ ;16,67,044

ವಿಧಾನಸಭಾ ಕ್ಷೇತ್ರವಾರು ಬಲಾಬಲ

ಒಟ್ಟು– 8

ಕಾಂಗ್ರೆಸ್‌ 4: ಚಾಮರಾಜನಗರ, ಹನೂರು, ವರುಣಾ, ಎಚ್‌.ಡಿ.ಕೋಟೆ

ಬಿಜೆಪಿ 2: ಗುಂಡ್ಲುಪೇಟೆ, ನಂಜನಗೂಡು

ಜೆಡಿಎಸ್‌ 1: ತಿ.ನರಸೀಪುರ

ಬಿಎಸ್‌ಪಿ 1: ಕೊಳ್ಳೇಗಾಲ

***********

ಹಿಂದಿನ ಚುನಾವಣೆಗಳ ಲೆಕ್ಕಾಚಾರ

2009

ವಿಜೇತರು: ಆರ್‌.ಧ್ರುವನಾರಾಯಣ, ಗೆಲುವಿನ ಅಂತರ:4,002

ಆರ್‌.ಧ್ರುವನಾರಾಯಣ; ಕಾಂಗ್ರೆಸ್‌; 38%

ಎ.ಆರ್‌.ಕೃಷ್ಣಮೂರ್ತಿ; ಬಿಜೆಪಿ; 37.59%

ಎಂ.ಶಿವಣ್ಣ (ಕೋಟೆ); ಜೆಡಿಎಸ್; 10.98%

ಎನ್‌.ಮಹೇಶ್‌; ಬಿಎಸ್‌ಪಿ; 7.03%

ಇತರೆ; 6.4%

**********

2014

ವಿಜೇತರು: ಆರ್‌.ಧ್ರುವನಾರಾಯಣ, ಗೆಲುವಿನ ಅಂತರ: 1,41,182

ಆರ್‌.ಧ್ರುವನಾರಾಯಣ; ಕಾಂಗ್ರೆಸ್‌; 50.10%

ಎ.ಆರ್.ಕೃಷ್ಣಮೂರ್ತಿ; ಬಿಜೆಪಿ; 37.64%

ಎಂ.ಶಿವಣ್ಣ (ಕೋಟೆ); ಜೆಡಿಎಸ್‌; 5.18%

ಇತರೆ; 74.08%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT