ಮಂಗಳವಾರ, ಸೆಪ್ಟೆಂಬರ್ 17, 2019
21 °C

12 ಸಾವಿರ ಅಡಿ ಎತ್ತರದಲ್ಲಿ ಸಂಸ್ಕೃತ ಧ್ವಜ ನೆಟ್ಟ ಶಿವಮೊಗ್ಗದ ಮಕ್ಕಳು

Published:
Updated:
Prajavani

ಶಿವಮೊಗ್ಗ: ಶಿವಮೊಗ್ಗದ ಮಕ್ಕಳು ಸಹ್ಯಾದ್ರಿ ತಪ್ಪಲಿನಿಂದ ಹಿಮಾದ್ರಿಯ ಚಂದ್ರಕಣಿ ಪಾಸ್‌ನ 12ಸಾವಿರ ಅಡಿಗಳ ಪರ್ವತವನ್ನು ಹತ್ತಿ ಸಂಸ್ಕೃತ ಧ್ವಜಾರೋಹಣ ಮಾಡುವ ಮೂಲಕ ಹೊಸ ದಾಖಲೆ ಬರೆದರು.

ವಾಸವಿ ಪಬ್ಲಿಕ್ ಸ್ಕೂಲ್, ಸಂಸ್ಕೃತ ಭಾರತಿ ಹಾಗೂ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ಸಹಯೋಗದಲ್ಲಿ ಶಿವಮೊಗ್ಗದ 15 ವರ್ಷದೊಳಗಿನ 21 ಮಕ್ಕಳು ಮೇ 5ರ ಭಾನುವಾರ ಹಿಮಾಲಯ ಪರ್ವತದ ಚಂದ್ರಕಣಿ ಪಾಸ್‌ನಲ್ಲಿ ಧ್ವಜಾರೋಹಣ ಮಾಡಿದರು. ಈ ಮೂಲಕ ದೇಶದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಪರ್ವತದಲ್ಲಿ ಸಂಸ್ಕೃತ ಧ್ವಜ ನೆಟ್ಟು ಅಭಿಮಾನದಿಂದ ಬೀಗಿದರು. 

ಇದೇ 3ರಂದು ಪರ್ವತಾರೋಹಣ ಆರಂಭಿಸಿದ ತಂಡ ಮೇ 5ರಂದು ಬೆಳಿಗ್ಗೆ 11ಕ್ಕೆ ಧ್ವಜಾರೋಹಣ ಮಾಡುವ ಸ್ಥಳವನ್ನು ತಲುಪಿತು. ಸದಸ್ಯರು ಸಿದ್ಧಪಡಿಸಿದ ಸಂಸ್ಕೃತ ಧ್ವಜದಲ್ಲಿ ಈ ದೇಶದ ಸೈನಿಕರ ತ್ಯಾಗ, ಸ್ಥೈರ್ಯ, ಭಾರತದ ಹಿರಿಮೆ, ಮತ್ತು ಸಂಸ್ಕೃತದ ಹಿರಿಮೆಯುಳ್ಳ ಶ್ಲೋಕವನ್ನು ಅಳವಡಿಸಲಾಗಿತ್ತು. 

ಶಿವಮೊಗ್ಗ ವಿದ್ಯಾರ್ಥಿಗಳೊಂದಿಗೆ ಸಹ ಚಾರಣಿಗರಾದ ಛತ್ತೀಸ್‌ಘಡ, ಆಂಧ್ರ, ಮಹಾರಾಷ್ಟ್ರ, ಒಡಿಶಾದ ವಿದ್ಯಾರ್ಥಿಗಳು ಸೇರಿಕೊಂಡರು. ಪರ್ವತಾರೋಹಣ ಪೂರ್ವಭಾವಿಯಾಗಿ ಮಕ್ಕಳಿಗೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಬರೇಕಲ್‌ನಲ್ಲಿ ಏ.31ರಂದು ಚಾರಣವನ್ನು ಹಮ್ಮಿಕೊಳ್ಳಲಾಗಿತ್ತು. ಇದೀಗ  ಹಿಮಾಲಯ ಪರ್ವತ ಹತ್ತುವುದರಲ್ಲಿ ಯಶಸ್ವಿಯಾದರು. ಮಕ್ಕಳೊಂದಿಗೆ 9 ಮಂದಿ ಮಾರ್ಗದರ್ಶಕರು ತೆರಳಿದ್ದರು. 

Post Comments (+)