ಇರುವ ಒಂದೇ ದಾರಿಯೂ ಆತಂಕಕಾರಿ

7
ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿಯಲ್ಲಿ ನಿತ್ಯ ವಾಹನ ದಟ್ಟಣೆ: ಸಂಚಾರ ಅಸ್ತವ್ಯಸ್ತ

ಇರುವ ಒಂದೇ ದಾರಿಯೂ ಆತಂಕಕಾರಿ

Published:
Updated:
Deccan Herald

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲು ಉಳಿದಿರುವ ಏಕೈಕ ಮಾರ್ಗ ಚಾರ್ಮಾಡಿ ಘಾಟಿಯಲ್ಲಿಯೂ ದಿನ
ದಿಂದ ದಿನಕ್ಕೆ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದ್ದು, ಸಂಚಾರ ಅಸ್ತವ್ಯಸ್ತವಾಗುತ್ತಿದೆ.

ಇದೇ 16ರಿಂದ ಶಿರಾಡಿ ಘಾಟಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಅತ್ತ ಸಂಪಾಜೆ ಘಾಟಿಯಲ್ಲಿಯೂ ಮಣ್ಣು ಕುಸಿದು ಸಂಚಾರ ಸ್ಥಗಿತವಾಗಿದೆ.

ಚಾರ್ಮಾಡಿ ಘಾಟಿಯಲ್ಲಿಯೇ ಎಲ್ಲ ವಾಹನಗಳು ಸಂಚರಿಸಬೇಕಿದ್ದು, ನಿತ್ಯ ಸರಾಸರಿ 12 ಸಾವಿರಕ್ಕಿಂತಲೂ ಅಧಿಕ ವಾಹನಗಳು ಸಂಚರಿಸುವಂತಾಗಿದೆ. ಈ ರಸ್ತೆಯ ಮೇಲೆ ಒತ್ತಡ ಹೆಚ್ಚಾಗಿದೆ. ಇದರಿಂದ ಘಾಟಿಯ ಕೆಳಬದಿಯಲ್ಲಿ ಗುಡ್ಡ ಕುಸಿಯುವ ಭೀತಿ ಎದುರಾಗಿದೆ.

ಚಾರ್ಮಾಡಿ ಘಾಟಿಯ ಐದನೇ ತಿರುವಿನಲ್ಲಿ ಗುಡ್ಡ ಕುಸಿಯುವ ಸ್ಥಿತಿ ಉಂಟಾಗಿದ್ದು, ಕುಸಿತ ಉಂಟಾದರೆ ಚಾರ್ಮಾಡಿ ಘಾಟಿ ರಸ್ತೆಯೂ ಹಲವಾರು ದಿನ ಬಂದ್ ಆಗುವ ಭೀತಿ ಎದುರಾಗಲಿದೆ. ಇನ್ನೊಂದು ವಾಹನಕ್ಕೆ ದಾರಿ ಬಿಟ್ಟು ಕೊಡುವ ಸಂದರ್ಭದಲ್ಲಿ, ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ನಿಶ್ಚಿತ ಎನ್ನುವಂತಾಗಿದೆ. 

ಸಂಚಾರ ದಟ್ಟಣೆ ಸಾಮಾನ್ಯ: ಚಾರ್ಮಾಡಿಯಲ್ಲಿ ನಿತ್ಯ ವಾಹನ ಸಂಚಾರಕ್ಕೆ ಒಂದಿಲ್ಲೊಂದು ತಡೆ ಉಂಟಾಗುತ್ತಿದೆ. ಗುರುವಾರ ರಾತ್ರಿ ರಸ್ತೆಗೆ ಮರ ಬಿದ್ದು, 2 ಗಂಟೆ ಸಂಚಾರ ಸ್ಥಗಿತವಾಗಿತ್ತು. ಶುಕ್ರವಾರ ರಾತ್ರಿಯೂ ಚಾರ್ಮಾಡಿಯ 10ನೇ ತಿರುವಿನಲ್ಲಿ ಕಂಟೇನರ್‌ ಟ್ರಕ್‌ ಕೆಟ್ಟು ನಿಂತು, ಸುಮಾರು 5 ಕಿ.ಮೀ.ವರೆಗೂ ವಾಹನಗಳು ಸಾಲುಗಟ್ಟಿ ನಿಂತಿ
ದ್ದವು. ಸಂಚಾರ ಸ್ಥಗಿತವಾದ್ದರಿಂದ ಮಂಗಳೂರು, ಉಡುಪಿಗೆ ಬರುವಷ್ಟರಲ್ಲಿ 5 ಗಂಟೆ ವಿಳಂಬವಾಗಿದೆ. ಮಂಗಳೂರು, ಧರ್ಮಸ್ಥಳಕ್ಕೆ ನಿತ್ಯ ಸಾವಿರಾರು ಪ್ರಯಾಣಿಕರು ಬರುತ್ತಿದ್ದು, ಮಳೆಯಿಂದಾಗಿ ಸುಗಮ ವಾಹನ ಸಂಚಾರ ಸಾಧ್ಯವಾಗುತ್ತಿಲ್ಲ’ ಎಂದು ಖಾಸಗಿ ಬಸ್‌ ಚಾಲಕ ಶಿವಕುಮಾರ ತಿಳಿಸಿದ್ದಾರೆ.

****

ಭಾರಿ ವಾಹನ ಸಂಚಾರ ನಿಷೇಧ

ಏಕೈಕ ಸಂಪರ್ಕ ಮಾರ್ಗವಾಗಿರುವ ಚಾರ್ಮಾಡಿ ಘಾಟಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಭಾರಿ ವಾಹನಗಳ ಸಂಚಾರವನ್ನು ಶುಕ್ರವಾರ ರಾತ್ರಿಯಿಂದ ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ಆದೇಶ ಹೊರಡಿಸಿದ್ದಾರೆ.

ಚಾರ್ಮಾಡಿ ಘಾಟಿಯ 78 ಕಿ.ಮೀ.ನಿಂದ 86 ಕಿ.ಮೀವರೆಗಿನ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಅಲ್ಲದೇ ಭೂಕುಸಿತ ಉಂಟಾಗುತ್ತಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಈ ನಿಷೇಧ ಹೇರಲಾಗಿದೆ ಎಂದು ತಿಳಿಸಿದ್ದಾರೆ.

ಈ ಮಾರ್ಗದಲ್ಲಿ ಭಾರಿ ವಾಹನಗಳಾದ ಬುಲೆಟ್‌ ಟ್ಯಾಂಕರ್‌, ಕಾರ್ಗೋ ಕಂಟೈನರ್‌ ಹಾಗೂ ಲಾಂಗ್‌ ಚಾಸೀಸ್‌ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಕಾರು, ಜೀಪ್‌, ಮಿನಿ ವ್ಯಾನ್‌, ದ್ವಿಚಕ್ರ ವಾಹನಗಳು, ರಾಜಹಂಸ ಮತ್ತು ಸಾಮಾನ್ಯ ಬಸ್‌ಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

****
ಭಾರಿ ವಾಹನ ಸಂಚಾರ ನಿಷೇಧಿಸಲು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್‌ ಪ್ರಸ್ತಾವನೆ ಸಲ್ಲಿಸಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗಿದೆ.
-ಸಸಿಕಾಂತ್ ಸೆಂಥಿಲ್‌, ಜಿಲ್ಲಾಧಿಕಾರಿ

ಜಿಲ್ಲೆಯಿಂದ ಬೆಂಗಳೂರು ಕಡೆಗೆ ಹೋಗಲು ಚಾರ್ಮಾಡಿ ಘಾಟಿ ಏಕೈಕ ರಸ್ತೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಭಾರಿ ವಾಹನ, ಟ್ಯಾಂಕರ್ ಸಂಚಾರವನ್ನು ನಿಷೇಧಿಸಲಾಗಿದೆ.

-ಯು.ಟಿ. ಖಾದರ್‌
ಜಿಲ್ಲಾ ಉಸ್ತುವಾರಿ ಸಚಿವ

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !