‘ಗಿಫ್ಟ್‌’ ಆಸೆ: ₹20.85 ಲಕ್ಷ ಕಳೆದುಕೊಂಡ ಮಹಿಳೆ

7

‘ಗಿಫ್ಟ್‌’ ಆಸೆ: ₹20.85 ಲಕ್ಷ ಕಳೆದುಕೊಂಡ ಮಹಿಳೆ

Published:
Updated:

ದಾವಣಗೆರೆ: ಇಲ್ಲಿನ ಎಂಸಿಸಿ ‘ಎ’ ಬ್ಲಾಕ್‌ನ ಮಹಿಳೆಗೆ ಮೆಸೆಂಜರ್‌ ಮೂಲಕ ಪರಿಚಿತನಾದ ವಿದೇಶಿ ವ್ಯಕ್ತಿಯು ವಿಶೇಷ ಉಡುಗೊರೆ ನೀಡುವುದಾಗಿ ಆಮಿಷವೊಡ್ಡಿ, ವಿವಿಧ ಖಾತೆಗಳಿಗೆ ₹ 20.85 ಲಕ್ಷ ಹಾಕಿಸಿಕೊಂಡು ಇತರ 13 ಮಂದಿ ಜತೆಗೆ ಸೇರಿ ವಂಚಿಸಿದ್ದಾನೆ.

ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿರುವ ನೇತ್ರಾವತಿ ಹಣ ಕಳೆದುಕೊಂಡವರು. ಲಂಡನ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ವಾಸ ಇರುವುದಾಗಿ ಹೇಳಿಕೊಂಡಿರುವ ಸ್ಟೀವನ್‌ ಕ್ಲೆಮೆಂಟ್‌ ಎಂಬಾತ 2017ರ ನವೆಂಬರ್‌ನಲ್ಲಿ ಮೆಸೆಂಜರ್‌ ಮೂಲಕ ಪರಿಚಿತನಾಗಿದ್ದ. ಬಳಿಕ ಕರೆ ಮಾಡಿ ಮಾತನಾಡಿದ್ದ. ಆನಂತರ ಪರಸ್ಪರ ಕಷ್ಟ–ಸುಖ ಮಾತನಾಡಿಕೊಂಡಿದ್ದರು.

‘ನಗದು ಸಹಿತ ಒಂದು ವಿಶೇಷ ಗಿಫ್ಟ್‌ ಕಳುಹಿಸಿಕೊಟ್ಟಿದ್ದೇನೆ’ ಎಂದು ಆತ ತಿಳಿಸಿದ್ದ. ಆನಂತರ ರಿಟಾ ಎಂಬಾಕೆ ಕರೆ ಮಾಡಿ, ‘ಗಿಫ್ಟ್ ಬಂದಿದೆ. ಹೊರದೇಶದಿಂದ ಬಂದಿರುವುದರಿಂದ ₹ 28,700 ಕಟ್ಟಿ ಬಿಡಿಸಬೇಕು’ ಎಂದು ತಿಳಿಸಿದ್ದಾಳೆ.

ಆಕೆ ಮತ್ತು ಸುನೀತಾ ಚೌಧರಿ ಪದೇ ಪದೇ ಕರೆ ಮಾಡಿದ್ದರಿಂದ ಆಕೆ ತಿಳಿಸಿದ ಖಾತೆಗೆ ಹಣ ಪಾವತಿ ಮಾಡಲಾಗಿತ್ತು. ಆನಂತರವೂ ದುಬಾರಿ ಗಿಫ್ಟ್‌ ಎಂದು ಹೇಳಿ 13 ಮಂದಿಯ ಖಾತೆಗಳಿಗೆ ಹಣ ಹಾಕಿಸಿಕೊಂಡಿದ್ದಾರೆ. ಈಗ ರೀಟಾಳ ಮೊಬೈಲ್‌ ಸ್ವಿಚ್ಡ್ ಆಫ್‌ ಆಗಿದೆ.

‘ಗೆಳತಿ ಕೆ.ಡಿ. ನಾಗರತ್ನಾ ಮತ್ತು ನಾನು ವಿವಿಧ ಮೂಲಗಳಿಂದ ಸಾಲ ಮಾಡಿ ಈ ಹಣ ಹೊಂದಿಸಿದ್ದೆವು’ ಎಂದು ಸೈಬರ್‌ ಕ್ರೈಂ ವಿಭಾಗಕ್ಕೆ ನೇತ್ರಾವತಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !