ಸೋಮವಾರ, ಡಿಸೆಂಬರ್ 9, 2019
17 °C

ಕುರಿ ತಿಂದಿದ್ದಕ್ಕೆ ಚಿರತೆ ಕೊಂದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು/ಕೂಡ್ಲಿಗಿ: ತಾವು ಸಾಕಿದ್ದ ಕುರಿಯನ್ನು ತಿಂದಿತು ಎಂಬ ಕಾರಣಕ್ಕೆ ಚಿರತೆಯನ್ನು ಕೊಂದು ಅದರ ಚರ್ಮ ಮಾರಾಟ ಮಾಡಲು ಯತ್ನಿಸಿದ ಆರೋಪದಡಿ ಮೂವರು ಕುರಿಗಾಹಿಗಳನ್ನು ನಗರದ ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ದೇವರಹಟ್ಟಿಯ ಸುರೇಶ್, ಪಾಪಣ್ಣ ಹಾಗೂ ಬಸವರಾಜ ಬಂಧಿತರು. ಅವರಿಂದ ಚರ್ಮವನ್ನು ಜಪ್ತಿ ಮಾಡಿರುವ ಪೊಲೀಸರು, ಚಿರತೆ ಕೊಂದಿದ್ದ ಸ್ಥಳವಾದ ಕೂಡ್ಲಿಗಿಯ ಮಾರಮ್ಮನ ಗುಡ್ಡಕ್ಕೆ ಗುರುವಾರ ಕರೆದೊಯ್ದು ಮಹಜರು ನಡೆಸಿದರು.

ಗುಡ್ಡದಲ್ಲಿ ಆರೋಪಿಗಳನ್ನು ಸುತ್ತಾಡಿಸಿದ ಕೊಡಿಗೇಹಳ್ಳಿ ಠಾಣೆ ಪಿಎಸ್‍ಐ ವಿಜಯ್ ನೇತೃತ್ವದ ತಂಡ, ಚಿರತೆ ಕೊಂದ ಘಟನೆಯನ್ನು ದಾಖಲಿಸಿಕೊಂಡಿತು. ಅದರ ವಿಡಿಯೊ ಚಿತ್ರೀಕರಣ ಸಹ ಮಾಡಿಕೊಳ್ಳಲಾಯಿತು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು