ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್ ಒಡಲಲ್ಲೇ 400 ಮಂದಿಗೆ ಉಸಿರುಗಟ್ಟಿಸುವ ವಾತಾವರಣ: ಸಿಜೆ ಆತಂಕ

ಕಬ್ಬನ್ ಪಾರ್ಕ್ ನಡಿಗೆದಾರರ ಸಂಘಕ್ಕೆ ಹೈಕೋರ್ಟ್ ತರಾಟೆ
Last Updated 6 ಜನವರಿ 2020, 14:33 IST
ಅಕ್ಷರ ಗಾತ್ರ

ಬೆಂಗಳೂರು: 400ಕ್ಕೂ ಅಧಿಕ ಸಿಬ್ಬಂದಿ ಹೈಕೋರ್ಟ್ ತಳಮಹಡಿಯಲ್ಲಿ ನಿತ್ಯವೂ ಉಸಿರುಗಟ್ಟಿಸುವ ವಾತಾವರಣದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆ ಬಗ್ಗೆ ಈವರೆಗೂ ಸ್ವಲ್ಪವೂ ಕಾಳಜಿ ತೋರದ ನೀವು, ಇಂದು ಪರಿಸರ ಹಾಳಾಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದೀರಾ?

ಕಬ್ಬನ್ ಪಾರ್ಕ್ ವ್ಯಾಪ್ತಿಯಲ್ಲಿರುವ ಹೈಕೋರ್ಟ್ ಆವರಣದ ಸುಪರ್ದಿಗೊಳಪಟ್ಟ ಹಾಲಿ ರಾಜ್ಯ ವಕೀಲರ ಪರಿಷತ್ತಿನ ಕಟ್ಟಡವನ್ನು ಕೆಡವಿ ಹೈಕೋರ್ಟ್ ಹೆಚ್ಚವರಿ ಅಂತಸ್ತು ನಿರ್ಮಾಣ ಮಾಡುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘವನ್ನು ಸಿಜೆ ತರಾಟೆಗೆ ತೆಗೆದುಕೊಂಡರು.

ಐಎಂಎ ಪ್ರಕರಣ: ತನಿಖಾಧಿಕಾರಿ ಬದಲಾವಣೆ

"ಐಎಂಎ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಹಿರಿಯ ಅಧಿಕಾರಿ ಎ.ವೈ.ಯು ಕೃಷ್ಣ ಅವರನ್ನು ಬದಲಾವಣೆ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಇದೇ 16ರೊಳಗೆ ವರದಿ‌ ಸಲ್ಲಿಸಿ" ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್.

"ರಾಜಕೀಯ ಒತ್ತಡದಿಂದ ತನಿಖಾಧಿಕಾರಿ ಕೃಷ್ಣ ಅವರನ್ನು ಬದಲಾವಣೆ ಮಾಡಲಾಗುತ್ತಿದೆ" ಎಂದು ಅರ್ಜಿದಾರರ ಪರ ವಕೀಲರು ಹೈಕೋರ್ಟ್ಗೆ ದೂರಿದರು.

ಇದನ್ನು ಆಕ್ಷೇಪಿಸಿದ ಸಿಬಿಐ ಪರ ವಕೀಲರು, "ಎರವಲು ಸೇವೆ ಮೇಲೆ ಕೃಷ್ಣ ಅವರು ಸಿಬಿಐಗೆ ಬಂದು ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವಾವಧಿ ಇದೇ 17ಕ್ಕೆ ಮುಗಿಯುತ್ತದೆ. ಅವರು ಉತ್ತಮ ಅಧಿಕಾರಿಯಾಗಿದ್ದಾರೆ.‌ ಅವಧಿ‌ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಬದಲಾವಣೆ ಪ್ರಕ್ರಿಯೆ ನಡೆಯುತ್ತಿದೆ" ಎಂದು ಹೈಕೋರ್ಟ್ ಗೆ ತಿಳಿಸಿದರು.

ಈ ಮಧ್ಯೆ ಪ್ರಕರಣದತನಿಖೆಯ ಕುರಿತು ವರದಿಯನ್ನು ಸಿಬಿಐ ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT