ಶನಿವಾರ, ಡಿಸೆಂಬರ್ 7, 2019
25 °C

ತುಳು ಮೌಖಿಕ ಸಾಹಿತ್ಯದಲ್ಲಿ 5ರ ಪೋರನ ‘ವರ್ಲ್ಡ್ ರೆಕಾರ್ಡ್’

ಪ್ರದೀಶ್ ಎಚ್. Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕೆಂಬ ಕೂಗು ಕರಾವಳಿಯಲ್ಲಿ ಕೇಳುತ್ತಲೇ ಇದೆ. ಈ ಮಧ್ಯೆ ಮಂಗಳೂರಿನ 5 ವರ್ಷದ ಬಾಲಕ ತಕ್ಷಿಲ್ ಎಂ.ದೇವಾಡಿಗ ತುಳು ಮೌಖಿಕ ಸಾಹಿತ್ಯದ ವಿಚಾರದಲ್ಲಿ ‘ವಂಡರ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌’ನಲ್ಲಿ ಸ್ಥಾನ ಪಡೆದು, ಭಾಷೆಯ ಹಿರಿಮೆಯನ್ನು ಹೆಚ್ಚಿಸಿದ್ದಾನೆ.

ತುಳುನಾಡಿನ ಸಂಸ್ಕೃತಿ, ಜಾನಪದ, ಸಂಪ್ರ ದಾಯ, ಆಚಾರ– ವಿಚಾರಗಳನ್ನು ಸಮಗ್ರ ವಾಗಿ ಪರಿಚಯಿ ಸುವ ದೈವದ ಪಾರಿ, ನುಡಿಗಟ್ಟು, ಪೊಲಿ, ಸಂಧಿ, ಪಾಡ್ದನ, ಬಲೀಂದ್ರ ಕರೆ, ಓಬೆಲೆ ಹಾಡುಗಳನ್ನು ನಿರರ್ಗಳವಾಗಿ 36 ನಿಮಿಷ ಹೇಳುವ ಮೂಲಕ 2019 ಜೂನ್‌ನಲ್ಲಿ ಅದ್ಭುತವಾದ ಸಾಧನೆಯನ್ನು ತಕ್ಷಿಲ್‌ ಮಾಡಿದ್ದಾನೆ.

ಕೊಂಚಾಡಿಯಲ್ಲಿ ಉಪನ್ಯಾಸಕರಾದ ಮಹೇಶ್ ದೇವಾಡಿಗ ಹಾಗೂ ವಕೀಲೆ ಕಿರಣ ದೇವಾಡಿಗ ದಂಪತಿ ಪುತ್ರ ತಕ್ಷಿಲ್‌ ಒಂದೆರಡು ವರ್ಷದ ಮಗುವಾಗಿದ್ದಾಗಲೇ ತುಳುವಿನಲ್ಲಿ ಅರಳು ಹುರಿಯಂತೆ ಮಾತನಾಡುತ್ತಿದ್ದ. ಆತನ ಆಸಕ್ತಿಯನ್ನು ಕಂಡು ಎರಡೂವರೆ ವರ್ಷದಲ್ಲೇ ಜಾನಪದ ವಿದ್ವಾಂಸ ದಯಾನಂದ ಕತ್ತಲಸಾರ್‌ ಅವರಿಂದ ತರಬೇತುಗೊಳಿಸಿದ್ದಾರೆ.

‘ತಕ್ಷಿಲ್‌ ನದು ವಯ ಸ್ಸಿಗೆ ಮೀರಿದ ಪ್ರತಿಭೆ. ಹೇಳಿದ್ದನ್ನು ಕೇಳಿಯೇ ಕಲಿತಿ ದ್ದಾನೆ. ತುಳು ಭಾಷೆಯ 31 ವಿವಿಧ ಮಜಲುಗಳ ಬಗ್ಗೆ ಕಲಿತಿದ್ದಾನೆ. ವರ್ಲ್ಡ್ ರೆಕಾರ್ಡ್ ಮೂಲಕ ತುಳು ಭಾಷೆಯ ಸೌಂದರ್ಯ ಹೆಚ್ಚಿಸಿದ್ದಾನೆ’ ಎನ್ನುತ್ತಾರೆ ಪ್ರಸ್ತುತ ಕರ್ನಾಟಕ ತುಳು ಅಕಾಡೆಮಿಯ ಅಧ್ಯಕ್ಷರೂ ಆಗಿರುವ ದಯಾನಂದ ಕತ್ತಲಸಾರ್‌.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು