22 ದಿನ, 153 ಪ್ರಕರಣ ಇತ್ಯರ್ಥಗೊಳಿಸಿದ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ

7

22 ದಿನ, 153 ಪ್ರಕರಣ ಇತ್ಯರ್ಥಗೊಳಿಸಿದ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ

Published:
Updated:
Deccan Herald

ಚಿತ್ರದುರ್ಗ: ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ಬಿ. ವಸ್ತ್ರಮಠ ಅವರು 22 ದಿನಗಳಲ್ಲಿ 153 ಪ್ರಕರಣ ಇತ್ಯರ್ಥಗೊಳಿಸಿ ಹೊಸ ಮೈಲುಗಲ್ಲು ಸೃಷ್ಟಿಸಿದ್ದಾರೆ.

ಸೆಪ್ಟೆಂಬರ್‌ ತಿಂಗಳಲ್ಲಿ ನಡೆದ 22 ದಿನಗಳ ಕಲಾಪದಲ್ಲಿ ಈ ಸಾಧನೆ ಮಾಡಿದ್ದಾರೆ. ನ್ಯಾಯಾಧೀಶರೊಬ್ಬರು ಏಳು ತಿಂಗಳಲ್ಲಿ ಮಾಡಬಹುದಾದ ಕಾರ್ಯವನ್ನು ಒಂದೇ ತಿಂಗಳಲ್ಲಿ ಮುಗಿಸಿದ್ದಾರೆ. ತ್ವರಿತ ನ್ಯಾಯದಾನದ ಮೂಲಕ ಕಕ್ಷಿದಾರರಲ್ಲಿ ಭರವಸೆಯ ಬೆಳಕು ಮೂಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯ ಭೂಸ್ವಾಧೀನಕ್ಕೆ ಸಂಬಂಧಿಸಿದ 55 ಪ್ರಕರಣಗಳು ಬಗೆಹರಿದಿವೆ. 59 ಕ್ರಿಮಿನಲ್‌ ಪ್ರಕರಣಗಳು ಇತ್ಯರ್ಥವಾಗಿದ್ದು, ನಾಲ್ಕು ಕೊಲೆ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ. 5 ಮೇಲ್ಮನವಿ ಅರ್ಜಿಗಳು ಬಗೆಹರಿದಿವೆ. ಹಲವು ದಿನ ರಾತ್ರಿ 7ರವರೆಗೂ ಕಲಾಪಗಳು ನಡೆದಿವೆ ಎಂದು ನ್ಯಾಯಾಲಯದ ಮೂಲಗಳು ಮಾಹಿತಿ ನೀಡಿವೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !