ಹಾಡಹಗಲೇ ದುಷ್ಕೃತ್ಯ: ಮನೆಗೆ ನುಗ್ಗಿ ಮಗು ಅಪಹರಣ

ಮಂಗಳವಾರ, ಜೂಲೈ 16, 2019
28 °C

ಹಾಡಹಗಲೇ ದುಷ್ಕೃತ್ಯ: ಮನೆಗೆ ನುಗ್ಗಿ ಮಗು ಅಪಹರಣ

Published:
Updated:
Prajavani

ಉಡುಪಿ: ಕುಂದಾಪುರ ತಾಲ್ಲೂಕಿನ ಯಡಮೊಗ್ಗೆಯ ಕುಮ್ಟಿಬೇರು ಗ್ರಾಮದ ಸಂತೋಷ್ ಎಂಬುವರ ಮನೆಗೆ ನುಗ್ಗಿದ ಮುಸುಕುಧಾರಿಗಳು 1 ವರ್ಷ 3 ತಿಂಗಳ ಹೆಣ್ಣು ಮಗುವನ್ನು ಅಪಹರಿಸಿದ್ದಾರೆ.

ಸಾನ್ವಿಕ ಅಪಹರಣಕ್ಕೊಳಗಾದ ಮಗು. ಗುರುವಾರ ಬೆಳಿಗ್ಗೆ ತಾಯಿ ರೇಖಾ ಜತೆ ಮಗು ಮಲಗಿದ್ದಾಗ ದುಷ್ಕರ್ಮಿಗಳು ಅಪಹರಿಸಿದ್ದಾರೆ. ಅಪಹರಣ ಸುದ್ದಿ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಆತಂಕ ಸೃಷ್ಟಿಸಿದೆ. 

ಘಟನಾ ಸ್ಥಳಕ್ಕೆ ಜಿಲ್ಲಾ ಎಸ್‌ಪಿ ನಿಶಾ ಜೇಮ್ಸ್‌ ಸ್ಥಳಕ್ಕೆ ಭೇಟಿ ನೀಡಿ ಪೋಷಕರ ಬಳಿ ಮಾಹಿತಿ ಕಲೆಹಾಕಿದರು. ಶ್ವಾನದಳವನ್ನು ಕರೆಸಲಾಗಿತ್ತು.

ಮಗುವಿನ ಮಾಹಿತಿ ಸಿಕ್ಕರೆ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಎಸ್‌ಪಿ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !