ಮಂಗಳವಾರ, ನವೆಂಬರ್ 19, 2019
29 °C

ಐವರಿಗೆ ‘ಚುಂಚಶ್ರೀ’ ಪ್ರಶಸ್ತಿ

Published:
Updated:

ನಾಗಮಂಗಲ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಆದಿಚುಂಚನಗಿರಿ ಮಠ ನೀಡುವ, 2019ನೇ ಸಾಲಿನ ‘ಚುಂಚಶ್ರೀ’ ಪ್ರಶಸ್ತಿಗೆ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ (ಸಾಹಿತ್ಯ), ಪ್ರೊ.ಟಿ.ಶಿವಣ್ಣ (ಶಿಕ್ಷಣ), ಡಾ. ರತ್ನರಾಜು (ವೈದ್ಯಕೀಯ), ಎಸ್.ಡಿ.ಈಶನ್ (ಕ್ರೀಡೆ), ರಾಮಚಂದ್ರ ಮ್ಹೆತ್ರೆ (ಧಾರ್ಮಿಕ) ಭಾಜನರಾಗಿದ್ದಾರೆ.

ಪ್ರಶಸ್ತಿಯು ₹50 ಸಾವಿರ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.

ಸೆ. 24ರಂದು ಮಠದಲ್ಲಿ ನಡೆಯುವ ಸಮಾರಂಭದಲ್ಲಿ, ಕಂದಾಯ ಸಚಿವ ಆರ್.ಅಶೋಕ್ ಪ್ರಶಸ್ತಿ ಪ್ರದಾನ ಮಾಡುವರು ಎಂದು ಆದಿಚುಂಚನಗಿರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಕೆ. ಲೋಕೇಶ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

 

ಪ್ರತಿಕ್ರಿಯಿಸಿ (+)