ಶನಿವಾರ, ಜನವರಿ 25, 2020
16 °C

ಮಂಗಳೂರು| ಪ್ರತಿಭಟನೆಯಲ್ಲಿ ಇಬ್ಬರು ಗಂಭೀರ, ಕರ್ಫ್ಯೂ ಜಾರಿ, ಶಾಲೆಗಳಿಗೆ ರಜೆ

ಎಎನ್‌ಐ Updated:

ಅಕ್ಷರ ಗಾತ್ರ : | |

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಇಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಘಟನೆಯಲ್ಲಿ 20 ಪೊಲೀಸರಿಗೆ ಗಾಯಗಳಾಗಿವೆ. ಇಬ್ಬರು ನಾಗರಿಕರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಗರದಲ್ಲಿ ಉದ್ರಿಕ್ತ ವಾತಾವರಣ ಮುಂದುವರಿದಿದ್ದು, ಹಂಪನಕಟ್ಟೆ, ಬಂದರು ಸೇರಿದಂತೆ ಉಪನಗರ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.

ಮಂಗಳೂರಿನ ಉತ್ತರ, ದಕ್ಷಿಣ, ಪೂರ್ವ, ಬರ್ಕೆ ಮತ್ತು ಉರ್ವ ಠಾಣೆ ವ್ಯಾಪ್ತಿಯಲ್ಲಿ 20 ರಂದು ಮಧ್ಯರಾತ್ರಿವರೆಗೆ ಕರ್ಫ್ಯೂ ವಿಧಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಇನ್ನೊಂದೆಡೆ ಮಂಗಳೂರು ವಿಭಾಗದ ಸಾರಿಗೆ ಸಂಸ್ಥೆಯ ಡಿಪೋಟ್‌–2ರ ಮೇಲೆ ಕಲ್ಲು ತೂರಾಟ ನಡೆದಿದೆ. ಈ ವೇಳೆ ಇಬ್ಬರು ಗಾಯಗೊಂಡಿದ್ದಾರೆ. ಬಸ್‌ಗಳು ಹಾನಿಗೀಡಾಗಿವೆ.

ಮಂಗಳೂರು ಉದ್ರಿಕ್ತಗೊಂಡಿರುವ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯ ಎಲ್ಲ ಶಾಲೆ–ಕಾಲೇಜುಗಳಿಗೆ ಶುಕ್ರವಾರ (ಡಿ.20) ರಜೆ ಘೋಷಣೆ ಮಾಡಿರುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್‌ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು