ಲಕ್ಷ್ಮಿ ಪೂಜೆಗೆ ಕನಕ ಸಮೃದ್ಧಿ ಕಳಸ

7
Krishnaih chetty jewellers

ಲಕ್ಷ್ಮಿ ಪೂಜೆಗೆ ಕನಕ ಸಮೃದ್ಧಿ ಕಳಸ

Published:
Updated:
Deccan Herald

ಗೃಹಪ್ರವೇಶವಿರಲಿ, ದೀಪಾವಳಿಯ ಲಕ್ಷ್ಮಿ ಪೂಜೆ ಇರಲಿ ಅಲ್ಲಿ ಕಳಸದ ಪೂಜೆಯೇ ಪ್ರಧಾನ. ಗೃಹಪ್ರವೇಶದಲ್ಲಂತೂ ಮನೆಯೊಡತಿಗಿಂತ ಕಳಸವೇ ಮುಂದೆ ಇರುತ್ತದೆ. ಪಂಚಭೂತಗಳ ಸಮಾಗಮವಾಗಿರುವ ಕಳಶಕ್ಕೆ ಎಲ್ಲಾ ಧಾರ್ಮಿಕ ಆಚರಣೆಗಳಲ್ಲೂ ಆದ್ಯತೆ ಇದೆ.

ದೀಪಾವಳಿಯ ಲಕ್ಷ್ಮೀಪೂಜೆಗಾಗಿ ‘ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್‌ ಆಫ್‌ ಜ್ಯುವೆಲ್ಲರ್ಸ್’ ವಿಶೇಷ ವಿನ್ಯಾಸದ ‘ಕನಕ ಸಮೃದ್ಧಿ ಕಳಸ’ವನ್ನು ರೂಪಿಸಿದೆ. ಅಧ್ಯಾತ್ಮ ಮತ್ತು ಆಧುನಿಕತೆಯ ಸಮಾಗಮವಾಗಿರುವ ಈ ಕಳಸ ಸಂಪ್ರದಾಯಸ್ಥರಿಗಷ್ಟೇ ಅಲ್ಲ, ಆಧುನಿಕ ಮನೋಭಾವದ ಯುವಜನಾಂಗಕ್ಕೂ ಇಷ್ಟವಾಗುವಂತಿದೆ. ಶೇ 92ರಷ್ಟು ಅಪ್ಪಟ ಬೆಳ್ಳಿಯಿಂದ ಮಾಡಿರುವ ಈ ಕಳಸದಲ್ಲಿ ತೆಂಗಿನಕಾಯಿ ಬದಲು ನಾಣ್ಯಗಳನ್ನು, ವೀಳ್ಯೆದೆಲೆ ಬದಲಾಗಿ ನೋಟುಗಳ ವಿನ್ಯಾಸವಿದೆ. ಮುಚ್ಚಳವನ್ನೂ ಹೊಂದಿರುವ ಕಳಸಕ್ಕೆ ಲಾಕಿಂಗ್ ವ್ಯವಸ್ಥೆ ಇರುವುದು ವಿಶೇಷ.

ಚೊಂಬಿನ ಕೆಳಭಾಗದಲ್ಲಿ ಆಕರ್ಷಕ ಕಮಲದ ವಿನ್ಯಾಸವಿದೆ. ಅರ್ಧ ಚೊಂಬಿನ ವಿನ್ಯಾಸದಲ್ಲಿ ಕಟ್ ವರ್ಕ್‌ಗಳಿದ್ದು, ಎಲ್ಲವನ್ನೂ ಬೆಳ್ಳಿಯಲ್ಲೇ ಮಾಡಿರುವುದು ವಿಶೇಷ. ಒಟ್ಟು 1ಕೆ.ಜಿ 200 ಗ್ರಾಂ ತೂಕವಿರುವ ಈ ಕಳಸದೊಳಗೆ ನಾಣ್ಯವನ್ನೂ ಹಾಕಬಹುದು. ನಾಣ್ಯ ಹಾಕಲು ಇಷ್ಟವಿಲ್ಲದವರು ಎಲ್ಇಡಿ ದೀಪ ಬೆಳಗಿಸುವ ವ್ಯವಸ್ಥೆ ಮಾಡಲಾಗಿದೆ. ದೀಪದ ಮಹತ್ವ ಸಾರುವ ಮಂತ್ರವನ್ನು ಇಂಗ್ಲಿಷ್ ಮತ್ತು ಸಂಸ್ಕೃತದಲ್ಲಿ ಕೆತ್ತಲಾಗಿದೆ. ಭಾರತೀಯ ಆಭರಣ ತಯಾರಕರ ಕೈಯಲ್ಲಿ ವಿನ್ಯಾಸಗೊಂಡಿರುವ ಈ ಕಳಸದ ಮೇಲ್ಭಾಗದಲ್ಲಿ ಹಳೇ ಕಾಲದ ಇಂಗ್ಲಿಷ್ ನಾಣ್ಯಗಳಿವೆ. ಹಾಗಾಗಿ, ಇದನ್ನು ಬರೀ ಹಿಂದೂಗಳಷ್ಟೇ ಅಲ್ಲ ಇತರ ಧರ್ಮದವರೂ ಖರೀದಿಸಬಹುದು. 150 ವರ್ಷಗಳ ಇತಿಹಾಸ ಹೊಂದಿರುವ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಫ್‌ ಆಫ್‌ ಜ್ಯುವೆಲರ್ಸ್, ಇತಿಹಾಸದ ನೆನಪಿಗಾಗಿ ಕಳಸದ ಮೇಲೆ ಇಂಗ್ಲಿಷ್ ನಾಣ್ಯಗಳನ್ನು ರೂಪಿಸಿದೆ.

ಪ್ರತಿ ಹಬ್ಬಕ್ಕೂ ಒಂದೊಂದು ಉತ್ಪನ್ನಗಳನ್ನು ಬಿಡುಗಡೆ ಮಾಡುವ ಈ ಜ್ಯುವೆಲರ್ಸ್ ತಮ್ಮ ಮನಮೋಹಕ ವಿನ್ಯಾಸಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ. ಕಳಸದ ಪ್ಯಾಕೇಜಿನಲ್ಲಿ ಒಟ್ಟು 9 ಐಟಂಗಳಿದ್ದು ಕಳಸ ಅಲ್ಲಾಡದಂತೆ ಕುಷನ್ ವ್ಯವಸ್ಥೆ ಇದೆ. ಒಟ್ಟು 150 ಕಳಸಗಳನ್ನು ಮಾತ್ರ ರೂಪಿಸಲಾಗಿದ್ದು, ಕೃಷ್ಣಯ್ಯ ಚೆಟ್ಟಿ ಸಮೂಹದ ಜ್ಯುವೆಲರ್ಸ್‌ನ ಮಳಿಗೆಗಳಲ್ಲಿ ಈ ಕಳಸ ದೊರೆಯುತ್ತದೆ.

**

ಚಿನ್ನ ಉಳಿತಾಯ ಯೋಜನೆ: ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್‌ ಆಫ್‌ ಜ್ಯುವೆಲರ್ಸ್‌ನಲ್ಲಿ ಚಿನ್ನದ ಎರಡು ಉಳಿತಾಯ ಯೋಜನೆಗಳಿವೆ. ಗೋಲ್ಡ್ ಸ್ಟ್ಯಾಂಡರ್ಡ್ ಸೇವಿಂಗ್ಸ್ ಪ್ಲಾನ್ (ಜಿಎಸ್‌ಡಿಡಿ) ಮತ್ತು ಗೋಲ್ಡ್ ಅಡ್ವಾನ್ಸ್ ಪರ್ಚೇಸ್ ಪ್ಲಾನ್ (ಜಿಎಎಪಿ). ಈ ಯೋಜನೆಗಳ ಅವಧಿ ಒಟ್ಟು 11 ತಿಂಗಳು. ಈ ಹಣದ ಮೇಲೆ ಶೇ 12ರಷ್ಟು ಬಡ್ಡಿ ಹಣ ಸೇರಿಸುತ್ತೇವೆ. ಒಡವೆ ಖರೀದಿಸುವಾಗ ಬಂಗಾರದ ಬೆಲೆ ಹೆಚ್ಚಿದ್ದರೂ ಗ್ರಾಹಕರಿಗೆ ಹೊರೆಯಾಗದು ಎನ್ನುತ್ತಾರೆ ಸಿ.ಕೃಷ್ಣಯ್ಯ ಚೆಟ್ಟಿ ಜ್ಯುವೆಲರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೇಯಸ್ ವಿ. ಕೋಥಾ.

ತಿರುವಾಂಕೂರು ಸಂಗ್ರಹ ವಿಶೇಷ: ನಮ್ಮ ಹಿರಿಯರು ತಿರುವಾಂಕೂರು ಮಹಾರಾಜರ ಕುಟುಂಬಕ್ಕೆ ಒಡವೆ ವಿನ್ಯಾಸ ಮಾಡಿಕೊಡುತ್ತಿದ್ದರು. ಅದರ ನೆನಪಿಗಾಗಿ ನಮ್ಮ ಕುಶಲಕರ್ಮಿಗಳು ಕೇರಳಕ್ಕೆ ತೆರಳಿ ಆ ಮನೆತನದ ವಿನ್ಯಾಸಗಳನ್ನು ಅಧ್ಯಯನ ಮಾಡಿ ತಿರುವಾಂಕೂರು ವಿನ್ಯಾಸದ ವಿಶೇಷ ಒಡವೆಗಳ ಸಂಗ್ರಹವನ್ನು ರೂಪಿಸಿದ್ದಾರೆ. ರಾಜ ಮನೆತನದ ವಿವಿಧ ವಿನ್ಯಾಸದ ಆಭರಣಗಳು ಆಕರ್ಷವಾಗಿದ್ದು, ಧರಿಸಲು ಹಗುರವಾಗಿವೆ. ಈ ವಿನ್ಯಾಸ ಈ ದೀಪಾವಳಿಯ ವಿಶೇಷ ಸಂಗ್ರಹ ಎಂದು ವಿವರಿಸುತ್ತಾರೆ ಶ್ರೇಯಸ್.

ಫೇಸ್‌ಬುಕ್ ಪುಟ: https://www.facebook.com/ckrishniahchettyandsons/

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !