ಸೋಮವಾರ, ಜುಲೈ 4, 2022
24 °C
ಹುಬ್ಬಳ್ಳಿಯ ಸುದ್ದಿಗೋಷ್ಟಿಯಲ್ಲಿ‌ ಹೇಳಿಕೆ

ಮೋದಿಗೆ ಸಾಬರ ಹೆಂಡಿರ‌ ಬಗ್ಗೆ ಇರುವ ಚಿಂತೆ ರಾಮನ ಬಗ್ಗೆ ಏಕಿಲ್ಲ: ಸಿ.ಎಂ ಇಬ್ರಾಹಿಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ:  ಪ್ರಧಾನಿ‌ ನರೇಂದ್ರ ಮೋದಿ ಅವರಿಗೆ ಸಾಬರ (ಮುಸ್ಲಿಂ) ಹೆಂಡತಿಯರ ಬಗ್ಗೆ ‌ಇರುವ ಚಿಂತೆ ರಾಮನ ಬಗ್ಗೆ ಏಕಿಲ್ಲ. ಅವರಿಗೆ ಅಯೋಧ್ಯಾ ವಿವಾದ ಪರಿಹಾರವಾಗುವುದೇ ಬೇಕಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಟೀಕಿಸಿದರು‌.

ಶುಕ್ರವಾರ ಇಲ್ಲಿ ಸುದ್ದಿಗೋಷ್ಟಿಯಲ್ಲಿ‌ ಮಾತನಾಡಿದ ಅವರು, ಅಯೋಧ್ಯೆ ವಿವಾದ ಬಗೆಹರಿಸಬೇಕೆಂಬ ಇಚ್ಚಾಶಕ್ತಿ ಬಿಜೆಪಿಗಿಲ್ಲ. ಈ ವಿವಾದ ಮುಂದಿಟ್ಟುಕೊಂಡು ಬಿಜೆಪಿ‌ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದರು.

ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ನಮ್ಮ ಅಭ್ಯಂತರ ಇಲ್ಲ. ಮುಸ್ಲಿಂ ಸಮುದಾಯವು ಕೂಡ ಇದನ್ನೇ ಹೇಳುತ್ತಿದೆ. ಆದರೆ ಮೋದಿ ವಿವಾದ ಪರಿಹರಿಸುವ ಪ್ರಯತ್ನ ಮಾಡುತ್ತಿಲ್ಲ. ಈ ವಿವಾದ ಜೀವಂತವಾಗಿ ಇಟ್ಟು ಮತ ಕೇಳುವ ಉದ್ದೇಶವಿದೆ ಎಂದರು.

ಮೋದಿಗೆ ತನ್ನ ಹೆಂಡತಿ ಬಗ್ಗೆ ಗೊತ್ತಿಲ್ಲ, ನಮ್ಮ ಹೆಂಡತಿ ಬಗ್ಗೆ ಮಾತನಾಡುತ್ತಾರೆ. ಹೆಂಡತಿಗೆ ಅವರು ಜೀವನಾಂಶ ಕೊಡುತ್ತಾರಾ? ಎಂದು ಪ್ರಶ್ನಿಸಿದರು.

ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದದ ಘಟನೆಗಳನ್ನು ಇಟ್ಟುಕೊಂಡು ಬಿಜೆಪಿಯವರು ಮತಗಳನ್ನ ಕೇಳುತ್ತಿದ್ದರು. ಈಗ ಅಯೋಧ್ಯಾ ವಿಷಯ ಮುಂದೆ ಮಾಡಿ ರಾಜಕಾರಣ ಮಾಡುತ್ತಿದ್ದಾರೆ ಎಂದರು.

ಗೋ ಸಂರಕ್ಷಣೆ ಮಾಡುತ್ತೇವೆ ಎನ್ನುವ ಕೇಂದ್ರ ಸರ್ಕಾರ, ಉತ್ತರ ಪ್ರದೇಶದಲ್ಲಿ ಗೋ ಪೂಜೆ ಮಾಡುತ್ತಿದೆ. ಆದರೆ, ಮೋದಿ ಅಧಿಕಾರಕ್ಕೆ ಬಂದ ಮೇಲೆ ಗೋ ಮಾಂಸ ರಪ್ತು ಹೆಚ್ಚಾಗಿದೆ. ಬಿಜೆಪಿ‌ ನಾಯಕರು ಗೋವುಗಳನ್ನು ಕತ್ತರಿಸುವವರು ಎಂದರು.

ಇವುಗಳನ್ನೆಲ್ಲ ನೋಡಿಕೊಂಡು ‌ಜನ ಸುಮ್ಮನೆ ಕುಳಿತಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸರಿಯಾಗಿ ಉತ್ತರ ಕೊಡುತ್ತಾರೆ. ಉಪಚುನಾವಣೆಯ ಎಲ್ಲ ಕ್ಷೇತ್ರಗಳಲ್ಲಿ ‌ಮೈತ್ರಿ‌ ಪಕ್ಷಗಳು ಗೆಲುವು ಪಡೆಯುತ್ತವೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು