ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದದ ಮನೆಗೆ ಸುಂದರ ಕೈತೋಟ

Last Updated 16 ಮೇ 2018, 19:30 IST
ಅಕ್ಷರ ಗಾತ್ರ

ಕುಂಡಗಳ ಆಯ್ಕೆ

ಗಾರ್ಡನ್ ನಿರ್ಮಿಸಲು ಹೋಗುವವರು ಗಮನಿಸಬೇಕಾದ ಪ್ರಮುಖ ಅಂಶ ಕುಂಡಗಳ ಆಯ್ಕೆ. ಕೈತೋಟ ಸುಂದರವಾಗಿ ಕಾಣುವುದು ಬಿಡುವುದು ನಾವು ಆಯ್ಕೆ ಮಾಡುವ ಕುಂಡಗಳನ್ನೇ ಅವಲಂಬಿಸಿರುತ್ತದೆ. ಗಿಡಗಳ ಆರೋಗ್ಯ ಮತ್ತು ಬೆಳವಣಿಗೆಯಲ್ಲೂ ಕುಂಡಗಳ ಪಾತ್ರ ಪ್ರಮುಖವಾದುದು.

ನೀವು ಯಾವ ಬಗೆಯ ಗಿಡಗಳನ್ನು ಬೆಳೆಸುತ್ತೀರಿ ಎಂಬುದರ ಮೇಲೆ ಹೂ ಕುಂಡಗಳನ್ನು ಆರಿಸಿಕೊಳ್ಳಬೇಕಾಗುತ್ತದೆ. ಸುಂದರವಾದ ವಿವಿಧ ಆಕಾರದ ಕುಂಡಗಳನ್ನು ಆಯ್ದುಕೊಳ್ಳುವುದೂ ಕೂಡ ಒಂದು ಕಲೆ.

ಗಿಡಗಳ ಆಯ್ಕೆ

ಸಾಮಾನ್ಯವಾಗಿ ಹೂ ಗಿಡಗಳನ್ನು ಬೆಳೆಯಲು ಆರಂಭಿಸುವವರಿಗೆ ಯಾವ ಗಿಡಗಳನ್ನು ಬೆಳೆಯಬೇಕು ಎಂಬ ಗೊಂದಲ ಕಾಡುವುದು ಸಹಜ. ಹವಾಮಾನ, ಋತು, ನೀರಿನ ಲಭ್ಯತೆ ಮತ್ತು ಮಣ್ಣಿನ ಗುಣಗಳನ್ನು ಆಧರಿಸಿ ಗಿಡಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಜತೆಗೆ ನಿಮಗೆ ಇಷ್ಟವಾದ ಬಣ್ಣಗಳ ಹೂ ಗಿಡಗಳನ್ನು ಬೆಳೆಸಲು ಅನುಭವಿಗಳ ಸಲಹೆ ಕೇಳಿ ಆಯ್ಕೆ ಮಾಡಿಕೊಳ್ಳಬಹುದು.

ಮಣ್ಣು ಮತ್ತು ಗೊಬ್ಬರ

ಗಾರ್ಡನ್‌ಗೆ ಬೇಕಾದ ಮಣ್ಣನ್ನು ಸಿದ್ಧಪಡಿಸುವುದು ಕೂಡ ಮುಖ್ಯ. ಮಣ್ಣಿನ ಗುಣಮಟ್ಟ ಕಳಪೆಯಾಗಿದ್ದಲ್ಲಿ ಗಿಡಗಳು ಚೆನ್ನಾಗಿ ಬೆಳೆಯುವುದಿಲ್ಲ. ಅದಕ್ಕಾಗಿ ಮಣ್ಣು ಮತ್ತು ಸರಿಯಾದ ಪ್ರಮಾಣದ ಸಾವಯವ ಗೊಬ್ಬರವನ್ನು ಬೆರೆಸಿ ಮಣ್ಣನ್ನು ಸಿದ್ಧಪಡಿಸಿಕೊಳ್ಳಬೇಕು. ಗಿಡಗಳಿಗೆ ಗೊಬ್ಬರವನ್ನು ನಿಯಮಿತವಾಗಿ ಮತ್ತು ಪ್ರಮಾಣಕ್ಕೆ ತಕ್ಕಂತೆ ಹಾಕಬೇಕು. ಅದಕ್ಕೆ, ಯಾವ ಯಾವ ಗಿಡಗಳಿಗೆ ಎಷ್ಟು ಗೊಬ್ಬರವನ್ನು ಹಾಕಬೇಕು ಎಂಬುದರ ಕುರಿತು ಅರಿವು ಬೆಳೆಸಿಕೊಳ್ಳಬೇಕು. ಗಿಡಗಳಿಗೆ ಆದಷ್ಟು ಸಾವಯವ ಗೊಬ್ಬರವನ್ನು ಹಾಕುವುದು ಉತ್ತಮ.

ನೀರು

ಗಿಡಗಳನ್ನು ಬೆಳೆಸುವಾಗ ನೀರು ಹೆಚ್ಚು ಕಡಿಮೆ ಆದರೆ ಕಷ್ಟ. ಅದಕ್ಕಾಗಿ ಒಂದು ಗಿಡಕ್ಕೆ ಎಷ್ಟು ನೀರನ್ನು ಹಾಕಬೇಕು ಎಂಬುದನ್ನು ತಿಳಿದುಕೊಂಡು ನೀರನ್ನು ಸಿಂಪಡಿಸಿ.ನೀರು ಅಗತ್ಯ ಪ್ರಮಾಣದಲ್ಲಿ ದೊರೆತರೆ ಗಿಡಗಳು ನಳಿನಳಿಸುತ್ತವೆ. ಮಣ್ಣಿನ ತೇವಾಂಶವನ್ನು ಉಳಿಸಿಕೊಳ್ಳಲು ದಿನಕ್ಕೆರಡು ಬಾರಿ ನೀರುಣಿಸುವುದು ಅಗತ್ಯ.

ಆನ್‌ಲೈನ್ ಫೋರಂ ಸೇರಿಕೊಳ್ಳಿ

ಹೂ ಗಿಡಗಳ ಗಾರ್ಡನ್ ಮಾಡಲು ಆರಂಭಿಸುವವರು ಅನುಭವಿಗಳ ಬಳಿ ಸಲಹೆ ಕೇಳುವುದು ಈಗ ಸುಲಭ. ಅದಕ್ಕಾಗಿ ಆನ್‌ಲೈನ್‌ ಫೋರಂಗಳು ಲಭ್ಯ ಇವೆ. ಇಲ್ಲಿ ನಿಮಗೆ ಅನುಭವಿಗಳು ಸಲಹೆ ಸೂಚನೆಗಳನ್ನು ನೀಡುತ್ತಾರೆ, ಸಂಶಯಗಳನ್ನು ಪರಿಹರಿಸುತ್ತಾರೆ.

ಸುಲಭ ಆರ್. ಭಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT