‘ಗಿಫ್ಟ್‌’ಗಾಗಿ ₹ 50 ಲಕ್ಷಕ್ಕೂ ಹೆಚ್ಚು ವೆಚ್ಚ?

7
ಸಿಎಂ, ಡಿಸಿಎಂ ಪ್ರಮಾಣವಚನಕ್ಕೆ ಬಂದ ಗಣ್ಯರಿಗೆ ಉಡುಗೊರೆ

‘ಗಿಫ್ಟ್‌’ಗಾಗಿ ₹ 50 ಲಕ್ಷಕ್ಕೂ ಹೆಚ್ಚು ವೆಚ್ಚ?

Published:
Updated:
Deccan Herald

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಪ್ರಮಾಣವಚನ ಸಮಾರಂಭಕ್ಕೆ ಬಂದ ಗಣ್ಯರಿಗೆ ‘ನೆನಪಿನ ಕಾಣಿಕೆ’ ನೀಡಲು ಬೊಕ್ಕಸದಿಂದ ₹ 50 ಲಕ್ಷಕ್ಕೂ ಹೆಚ್ಚು ವೆಚ್ಚ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಶ್ರೀಗಂಧ ಮರದಿಂದ ಕೆತ್ತಲಾಗಿರುವ ತಲಾ ₹ 1.50 ಲಕ್ಷ ಮೌಲ್ಯದ 50ಕ್ಕೂ ಹೆಚ್ಚು ಕಲಾಕೃತಿಗಳನ್ನು ಎಂ.ಜಿ. ರಸ್ತೆ ‘ಕಾವೇರಿ ಎಂಪೋರಿಯಂ’ನಿಂದ ಖರೀದಿಸಿ ಉಡುಗೊರೆ ನೀಡಲಾಗಿದೆ. ಪ್ರತಿ ಕಲಾಕೃತಿ 7ರಿಂದ 8 ಕಿಲೋ ತೂಕ ಇದೆ ಎನ್ನಲಾಗಿದೆ.

ಪ್ರಮಾಣ ವಚನ ಸಮಾರಂಭಕ್ಕೆ ತಗಲಿರುವ ವೆಚ್ಚದ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿರುವ ಸಾಮಾಜಿಕ ಕಾರ್ಯಕರ್ತ ಬಿ.ಎಸ್‌. ಗೌಡ, ಗಿಫ್ಟ್‌ ಖರೀದಿಸಿದ ಬಗ್ಗೆಯೂ ವಿವರ ಸಂಗ್ರಹಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 6

  Angry

Comments:

0 comments

Write the first review for this !