ಉಪ ಚುನಾವಣೆಯಿಂದ ದೂರವಿರುವಂತೆ ಮೈತ್ರಿ ಸರ್ಕಾರಕ್ಕೆ ಶಾಸಕ ಸುಧಾಕರ್‌ ಮನವಿ

7

ಉಪ ಚುನಾವಣೆಯಿಂದ ದೂರವಿರುವಂತೆ ಮೈತ್ರಿ ಸರ್ಕಾರಕ್ಕೆ ಶಾಸಕ ಸುಧಾಕರ್‌ ಮನವಿ

Published:
Updated:

ಬೆಂಗಳೂರು: ನವೆಂಬರ್‌ 3ರಂದು ನಡೆಯಲಿರುವ ಮೂರು ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಯಿಂದ ಕಾಂಗ್ರೆಸ್‌ – ಜೆಡಿಎಸ್‌ ನೇತೃತ್ವದ ಮೈತ್ರಿ ಸರ್ಕಾರ ದೂರವಿರುವಂತೆ ಚಿಕ್ಕಬಳ್ಳಾಪುರ ಶಾಸಕ ಡಾ. ಕೆ. ಸುಧಾಕರ್‌ ಮನವಿ ಮಾಡಿದ್ದಾರೆ.

ಈ ಕುರಿತು ಅವರು ಟ್ವೀಟ್‌ ಮಾಡಿದ್ದು, ‘ನಾಲ್ಕರಿಂದ ಐದು ತಿಂಗಳ ಅಂತರದಲ್ಲಿ ಮುಖ್ಯ ಚುನಾವಣೆ ಬರಲಿದ್ದು, ಉಪ ಚುನಾವಣೆಯನ್ನು ಘೋಷಣೆ ಮಾಡಿರುವ ಕೇಂದ್ರ ಚುನಾವಣಾ ಆಯೋಗದ (ಸಿಇಸಿ) ವಿರುದ್ಧ ಪ್ರತಿಭಟನೆ ಮಾಡಬೇಕು’ ಎಂದು ಹೇಳಿದ್ದಾರೆ.

ಚುನಾವಣಾ ಆಯೋಗದ ಕ್ರಮ ‘ಹಣದ ದುಂದು ವೆಚ್ಚ ಹಾಗೂ ಪ್ರಜಾಪ್ರಭುತ್ವದ ಕುಣಿತ ಇದಾಗಿದೆ’ ಎಂದು ಕಿಡಿಕಾರಿದ್ದಾರೆ.

ಸಂಸದರ ರಾಜೀನಾಮೆಯಿಂದ ತೆರವಾಗಿದ್ದ ಕರ್ನಾಟಕದ ಶಿವಮೊಗ್ಗ, ಬಳ್ಳಾರಿ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ನವೆಂಬರ್‌ 3ರಂದು ಉಪ ಚುನಾವಣೆ ನಡೆಯಲಿದೆ.

ರಾಮನಗರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಕೂಡ ಇದೇ ದಿನ ನಡೆಯಲಿವೆ. ಎಲ್ಲ ಫಲಿತಾಂಶಗಳು ನವೆಂಬರ್‌ 6ರಂದು ಪ್ರಕಟವಾಗಲಿವೆ.

ಶಿವಮೊಗ್ಗ ಸಂಸದ ಬಿ.ಎಸ್‌. ಯಡಿಯೂರಪ್ಪ, ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಮತ್ತು ಮಂಡ್ಯ ಸಂಸದ ಸಿ. ಎಸ್‌. ಪುಟ್ಟರಾಜು ಅವರ ರಾಜೀನಾಮೆಯಿಂದ ಈ ಮೂರು ಕ್ಷೇತ್ರಗಳು ತೆರವಾಗಿದ್ದವು.

ಇದೇ ಏಪ್ರಿಲ್‌–ಮೇನಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಈ ಮೂವರು ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಓ.ಪಿ.ರಾವತ್‌ ಶನಿವಾರ ಮತದಾನದ ದಿನಾಂಕವನ್ನು ಪ್ರಕಟಿಸಿದ್ದರು.

ಇದನ್ನೂ ಓದಿ...

ನ.3ಕ್ಕೆ ರಾಜ್ಯದ 3 ಲೋಕಸಭೆ, 2 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ

ನ.12ರಿಂದ ಡಿ.7 ಪಂಚರಾಜ್ಯ ಮಿನಿಸಮರಕ್ಕೆ ಮುಹೂರ್ತ ಫಿಕ್ಸ್

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 1

  Frustrated
 • 3

  Angry

Comments:

0 comments

Write the first review for this !