ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರ ಪತನಕ್ಕೆ ಮೈತ್ರಿ ಪಕ್ಷಗಳ ಮುಖಂಡರೇ ಕಾರಣ’

ಸಮಸ್ಯೆಗಳನ್ನು ಹಿರಿಯ ಮುಖಂಡರು ಯಾಕೆ ಬಗೆಹರಿಸಿಕೊಳ್ಳಲಿಲ್ಲ: ಹೊರಟ್ಟಿ ಪ್ರಶ್ನೆ
Last Updated 24 ಆಗಸ್ಟ್ 2019, 13:50 IST
ಅಕ್ಷರ ಗಾತ್ರ

ಕಾರವಾರ: ‘ಸಮ್ಮಿಶ್ರ ಸರ್ಕಾರ ಪತನವಾಗಲು ಕಾಂಗ್ರೆಸ್ ಮತ್ತು ಜೆಡಿಎಸ್ ‍ಪಕ್ಷಗಳ ನಾಯಕರೇ ಕಾರಣ. ಹಿರಿಯರಾದ ದೇವೇಗೌಡರು ಸರ್ಕಾರಸುಗಮವಾಗಿ ನಡೆಯಲು ಮಾರ್ಗದರ್ಶನ ಮಾಡಬೇಕಿತ್ತು. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೂ ಜೊತೆಯಾಗಿ ಮೊದಲೇ ಕುಳಿತು ಯಾಕೆ ಸಮಸ್ಯೆ ಬಗೆಹರಿಸಿಕೊಳ್ಳಲಿಲ್ಲ’ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಪ್ರಶ್ನಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಎರಡೂ ಪಕ್ಷಗಳ ಶಾಸಕರು ದಿನವೂ ಒಂದೊಂದು ಹೇಳಿಕೆ ಕೊಟ್ಟಾಗಲೂ ನಾಯಕರು ಸುಮ್ಮನಿದ್ದರು. ಅಶಿಸ್ತಿನ ವಿರುದ್ಧಕಠಿಣವಾದ ತೀರ್ಮಾನಗಳನ್ನುತೆಗೆದುಕೊಳ್ಳುವಶಕ್ತಿ ಅವರಲ್ಲಿ ಇರಲಿಲ್ಲ’ ಎಂದು ಅವರು ಹೇಳಿದರು.

‘ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದುವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವ ಮೊದಲೇ ಕಾಂಗ್ರೆಸ್‌ನವರು ದೇವೇಗೌಡರಿಗೆ ಶರಣಾದರು. ಕುಮಾರಸ್ವಾಮಿ ಮುಖ್ಯಮಂತ್ರಿ ಎಂದು ಅವರೇ ಪ್ರಕಟಿಸಿದರು. ಸರ್ಕಾರ ರಚನೆಯಾದ ಬಳಿಕ ಎರಡೂ ಪಕ್ಷಗಳ ಮುಖಂಡರಭಾವನೆಗಳು ಹೊಂದಿಕೊಳ್ಳಲಿಲ್ಲ. ಹೀಗಾಗಿ ಸರ್ಕಾರಕ್ಕೆ 14 ತಿಂಗಳು ಆದ ಮೇಲೆ ಆಪರೇಷನ್ ಕಮಲದ ಪರಿಸ್ಥಿತಿ ನಿರ್ಮಾಣವಾಯ್ತು’ ಎಂದು ಅವರು ಅಭಿಪ್ರಾಯಪಟ್ಟರು.

‘ಬಿಜೆಪಿಯಲ್ಲೂ ಅತೃಪ್ತರು ಜಾಸ್ತಿಯಾಗಿದ್ದಾರೆ. ಆದರೆ, ಆ ಪಕ್ಷದ ಹೈಕಮಾಂಡ್ ಸ್ವಲ್ಪ ಗಟ್ಟಿಯಾಗಿದೆ. ಇದೊಂದೇ ನಮಗೂ ಅವರಿಗೂ ಇರುವ ವ್ಯತ್ಯಾಸ. ಅತೃಪ್ತಿಯ ಎಲ್ಲ ಮನಸ್ಸುಗಳೂ ಕೂಡಿ ಇನ್ನೊಂದು ಸ್ವಲ್ಪ ದಿನ ಸರ್ಕಾರ ನಡೆಸುತ್ತವೆ ಎಂದು ನಾನು ನಂಬಿದ್ದೇನೆ’ ಎಂದರು.

‘ಕತ್ತಿ’ಗೆ ಗಾಳ ಹಾಕಿಲ್ಲ:ಶಾಸಕ ಉಮೇಶ ಕತ್ತಿ ಅವರನ್ನು ಸೆಳೆಯಲು ನೀವು ಪ್ರಯತ್ನಿಸಿದ್ದೀರಿ ಎನ್ನಲಾಗುತ್ತಿದೆ ಎಂದು ಸುದ್ದಿಗಾರರು ಕೇಳಿದಾಗ ಪ್ರತಿಕ್ರಿಯಿಸಿದ ಬಸವರಾಜ ಹೊರಟ್ಟಿ,‘ಶಾಸಕರ ಭವನದಲ್ಲಿ ಶಾಸಕ ಉಮೇಶ ಕತ್ತಿ ಮತ್ತು ನನ್ನದು ಅಕ್ಕಪಕ್ಕದ ಕೊಠಡಿ. ಅವರು ನನ್ನನ್ನು ಕರೆದು,ಎಂಟು ಸಲ ಆರಿಸಿ ಬಂದರೂ ತನಗೆ ಅನ್ಯಾಯವಾಗಿದೆ. ಹಾಗಾಗಿರಾಜೀನಾಮೆ ಕೊಟ್ಟು ಮನೆಗೆ ಹೋಗುವುದಾಗಿ ಹೇಳಿದರು. ಅದಕ್ಕೆ ನಾನು, ಯಾವ ಮನೆ ಕಡೆಗೆ ಹುಕ್ಕೇರಿಗಾ ಅಥವಾ ಜನತಾ ಪರಿವಾರಕ್ಕಾ ಎಂದುಕೇಳಿದೆ. ಅದಕ್ಕೆ ಕತ್ತಿ ನಗುತ್ತಾ, ಜನತಾ ಪರಿವಾರವೇಚೆನ್ನಾಗಿತ್ತು ಎಂದರು. ನಾನು ಅವರಿಗೆರಾಜೀನಾಮೆ ಕೊಡಬೇಡಿ, ಕಾಲ ಬದಲಾಗ್ತದೆ, ನೋಡೋಣ ಎಂದು‌ಹೇಳಿದ್ದೇನೆ’ ಎಂದು ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT