ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರರನ್ನು ರಕ್ಷಿಸಿದ ಭಾರತೀಯ ತಟರಕ್ಷಕ ದಳ

Last Updated 20 ಮಾರ್ಚ್ 2019, 15:13 IST
ಅಕ್ಷರ ಗಾತ್ರ

ಕಾರವಾರ:ದೋಣಿಯ ಎಂಜಿನ್ ಕೆಟ್ಟು ಮೂರು ದಿನಗಳಿಂದ ಸಮುದ್ರದಲ್ಲಿ ಪರದಾಡುತ್ತಿದ್ದ ಮೀನುಗಾರರನ್ನು ಭಾರತೀಯ ತಟರಕ್ಷದ ದಳದ ಸಿಬ್ಬಂದಿ ಮಂಗಳವಾರ ರಕ್ಷಿಸಿದ್ದಾರೆ.

ತಮಿಳುನಾಡಿನಕನ್ಯಾಕುಮಾರಿಯ ಆಂಟೋ ಎಂಬುವವರ‘ಇಮಾನ್ಯುವೆಲ್’ ಹೆಸರಿನ ದೋಣಿಯಲ್ಲಿ11 ಮೀನುಗಾರರಿದ್ದರು.ಕಾರವಾರದ ಕಡಲತೀರದಿಂದ 46 ನಾಟಿಕಲ್ ಮೈಲು (ಸುಮಾರು 85 ಕಿ.ಮೀ) ದೂರದಲ್ಲಿ ಕೆಟ್ಟು ನಿಂತಿತ್ತು.

ಅದರಲ್ಲಿದ್ದ ಇಂಧನ, ಆಹಾರ ಸಾಮಗ್ರಿ, ಕುಡಿಯುವ ನೀರು ಖಾಲಿಯಾಗಿ ಮೀನುಗಾರರು ಕಂಗಾಲಾಗಿದ್ದರು. ಈ ಬಗ್ಗೆ ಕನ್ಯಾಕುಮಾರಿಯ ಚಿನ್ನತುರೈ ಮೀನುಗಾರರ ಒಕ್ಕೂಟದಪ್ರತಿನಿಧಿ ರೇಗು ಎಂಬುವವರಿಗೆ ದೋಣಿಯಲ್ಲಿದ್ದ ಮೀನುಗಾರರು ಕರೆ ಮಾಡಿ ಮಾಹಿತಿ ನೀಡಿದ್ದರು. ಅವರುತಟರಕ್ಷದ ದಳಕ್ಕೆತಿಳಿಸಿದರು.

ಗಸ್ತು ದೋಣಿ‘ಸಿ–420’ಯಲ್ಲಿ ಕಾರವಾರದಿಂದ ಹೊರಟ ತಟರಕ್ಷಕ ದಳದ ಸಿಬ್ಬಂದಿ, ಕೂಡಲೇ ಕಾರ್ಯಾಚರಣೆ ನಡೆಸಿದರು. ಮೀನುಗಾರರನ್ನು ರಕ್ಷಿಸಿ, ಅವರಿಗೆ ಆಹಾರ ನೀಡಿದರು. ಜೊತೆಗೇ ತಾಂತ್ರಿಕ ನೆರವು ನೀಡಿ ಮೀನುಗಾರಿಕಾ ದೋಣಿಯ ಎಂಜಿನ್ ಚಾಲನೆ ಮಾಡಲು ಸಹಕರಿಸಿದರು.ಬಳಿಕ ಮೀನುಗಾರಿಕಾ ದೋಣಿಯು ಕೇರಳದ ಕೊಚ್ಚಿಯತ್ತ ಪ್ರಯಾಣ ಬೆಳೆಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT