ಬರಗಾಲದಿಂದ ಸಂಕಷ್ಟ: ಕಲ್ಪವೃಕ್ಷ ಬೆಳೆಗಾರರಿಗೆ ಬೆಂ‘ಬಲ’

7

ಬರಗಾಲದಿಂದ ಸಂಕಷ್ಟ: ಕಲ್ಪವೃಕ್ಷ ಬೆಳೆಗಾರರಿಗೆ ಬೆಂ‘ಬಲ’

Published:
Updated:

ಬೆಂಗಳೂರು: ಸತತ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ತೆಂಗು ಬೆಳೆಗಾರರಿಗೆ ಒಟ್ಟು ₹178 ಕೋಟಿ ಪ್ರೋತ್ಸಾಹಧನ ನೀಡಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ‘2015–16 ಹಾಗೂ 2016–17ರಲ್ಲಿ ತೀವ್ರ ಬರಗಾಲದಿಂದ ತೆಂಗು ಮರಗಳು ನಾಶವಾಗಿವೆ ಎಂದರು.

ಬರ ಪರಿಹಾರ ಮಾನದಂಡದ ಅಡಿ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಪರಿಹಾರ ನೀಡಿರಲಿಲ್ಲ. ಹಾಗಾಗಿ, ರಾಜ್ಯ ಸರ್ಕಾರದಿಂದಲೇ ಪರಿಹಾರ ನೀಡಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

ಹಾಸನ, ಚಿತ್ರದುರ್ಗ, ಚಾಮರಾಜನಗರ, ತುಮಕೂರು, ಮಂಡ್ಯ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ತೆಂಗು ಬೆಳೆಗಳು ನಾಶವಾಗಿವೆ. ಪರಿಹಾರ ನೀಡುವ ಹೊಣೆಯನ್ನು ತೋಟಗಾರಿಕಾ ಇಲಾಖೆಗೆ ವಹಿಸಲಾಗಿದೆ. ಪರಿಹಾರದ 2–3 ಮಾದರಿಗಳನ್ನು ಪರಿಶೀಲಿಸಲಾಗುತ್ತಿದೆ. ಜಿಲ್ಲಾ ಸಮಿತಿಗಳು ಈ ಸಂಬಂಧ ತೀರ್ಮಾನ ತೆಗೆದುಕೊಳ್ಳಲಿವೆ’ ಎಂದರು. 

ಅಂಕಿ ಅಂಶಗಳು

* 8 ಜಿಲ್ಲೆಗಳಲ್ಲಿ ಬೆಳೆ ಹಾನಿ

* 44,547 ಹೆಕ್ಟೇರ್ ಬೆಳೆ ನಾಶ

* 44.55 ಲಕ್ಷ ಮರಗಳು ನಾಶ

* 18 ಸಾವಿರ ಪ್ರತಿ ಹೆಕ್ಟೇರ್‌ಗೆ ಪರಿಹಾರ ಮೊತ್ತ

* ₹400 ಪ್ರತಿ ಮರಕ್ಕೆ ಪರಿಹಾರ

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !