ವಿವರ ಪ್ರಸ್ತಾವನೆಗೆ ಮುಖ್ಯಮಂತ್ರಿ ಸೂಚನೆ

7
ತೆಂಗಿನ ನಾರಿನ ಉದ್ಯಮ ಅಭಿವೃದ್ಧಿ

ವಿವರ ಪ್ರಸ್ತಾವನೆಗೆ ಮುಖ್ಯಮಂತ್ರಿ ಸೂಚನೆ

Published:
Updated:

ಬೆಂಗಳೂರು: ರಾಜ್ಯದ ತೆಂಗಿನ ನಾರಿನ ಉದ್ಯಮದ ಅಭಿವೃದ್ಧಿಗೆ ವಿವರವಾದ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತೆಂಗಿನ ನಾರಿನ ಅಭಿವೃದ್ಧಿ ನಿಗಮ ಹಾಗೂ ತೆಂಗಿನ ನಾರಿನ ಮಹಾಮಂಡಳಿಯ ಅಧಿಕಾರಿಗಳಿಗೆ ಸೂಚಿಸಿದರು.

ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಶುಕ್ರವಾರ ನಡೆದ ತೆಂಗಿನ ನಾರಿನ ಉದ್ದಿಮೆಗಳ ಪುನಶ್ಚೇತನದ ಸಭೆಯಲ್ಲಿ ಅವರು ಮಾತನಾಡಿದರು.

‘10 ಜಿಲ್ಲೆಗಳಲ್ಲಿ ತೆಂಗು ಬೆಳೆ ವ್ಯಾಪಕವಾಗಿದ್ದು, ತೆಂಗಿನ ನಾರು ಸ್ಥಳೀಯವಾಗಿ ಲಭ್ಯವಿರುವುದರಿಂದ ನಾರಿನ ಉತ್ಪನ್ನಗಳ ಉದ್ಯಮಗಳಿಗೆ ವಿಪುಲ ಅವಕಾಶವಿದೆ. ರೈತರಿಗೆ ಆದಾಯವೂ ದೊರೆಯುತ್ತದೆ. ಗ್ರಾಮೀಣಪ್ರದೇಶದಲ್ಲಿ ಮಹಿಳೆಯರಿಗೆ ಹೇರಳ ಉದ್ಯೋಗಾವಕಾಶವೂ ಇರುವುದರಿಂದ ಈ ಉದ್ಯಮಕ್ಕೆ ಉತ್ತೇಜನ ನೀಡಲಾಗುತ್ತದೆ’ ಎಂದರು.

‘ಉದ್ಯೋಗಾವಕಾಶ, ತರಬೇತಿಯ ಅಗತ್ಯ, ಮಾರುಕಟ್ಟೆ ಅವಕಾಶಗಳು, ಇತರ ರಾಜ್ಯಗಳಲ್ಲಿ ಈ ಉದ್ದಿಮೆಯ ಕಾರ್ಯನಿರ್ವಹಣೆ.. ಈ ಅಂಶಗಳನ್ನು ಪರಿಶೀಲಿಸಿ ಅಧ್ಯಯನ ನಡೆಸಿ ಪ್ರಸ್ತಾವನೆ ಸಲ್ಲಿಸಬೇಕು. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ಈ ಉದ್ಯಮಕ್ಕೆ ನೆರವು ಪಡೆಯಲು ಇರುವ ಅವಕಾಶಗಳನ್ನು ಪರಿಶೀಲಿಸಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !