ಶನಿವಾರ, ನವೆಂಬರ್ 23, 2019
17 °C
ಮತದಾರರ ಬೃಹತ್‌ ಪರಿಶೀಲನಾ ಆಂದೋಲನ ನ.18ರವರೆಗೆ ವಿಸ್ತರಣೆ

ಮತದಾರರ ಮಾಹಿತಿ ಸಂಗ್ರಹ ಪ್ರಥಮ ಸ್ಥಾನದಲ್ಲಿ ಮಂಡ್ಯ

Published:
Updated:

ಬೆಂಗಳೂರು: ಯಾವುದೇ ತಪ್ಪುಗಳಿಲ್ಲದ, ಮತದಾರರ ಪಟ್ಟಿ ಸಿದ್ಧಪಡಿಸುವ ಸಲುವಾಗಿ ಚುನಾವಣಾ ಆಯೋಗ ಆರಂಭಿಸಿರುವ ಮತದಾರರ ಬೃಹತ್‌ ಪರಿಶೀಲನಾ ಆಂದೋಲನವನ್ನು ನವೆಂಬರ್‌ 18ರ ವರೆಗೆ ವಿಸ್ತರಿಸಲಾಗಿದ್ದು, ರಾಜ್ಯದಲ್ಲಿ ಸದ್ಯ ಮಾಹಿತಿ ಸಂಗ್ರಹದಲ್ಲಿ ಮಂಡ್ಯ ಪ್ರಥಮ ಸ್ಥಾನದಲ್ಲಿದೆ.

‘ರಾಜ್ಯದಲ್ಲಿ ಇದುವರೆಗೆ 5,10,60,498 ಮಂದಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿನ 15.04 ಲಕ್ಷ ಮತದಾರರ ಪೈಕಿ 12.14 ಲಕ್ಷ ಮತದಾರರ ಮಾಹಿತಿ ಸಂಗ್ರಹ ಪೂರ್ಣಗೊಳ್ಳುವುದರೊಂದಿಗೆ ಶೇ 81ರಷ್ಟು ಸಾಧನೆ ದಾಖಲಾಗಿದೆ. 37.72 ಲಕ್ಷ ಮತದಾರರಿರುವ ಬೆಳಗಾವಿಯಲ್ಲಿ 2.26 ಲಕ್ಷ ಮತದಾರರ (ಶೇ 6) ಮಾಹಿತಿಯನ್ನು ಮಾತ್ರ ಇದುವರೆಗೆ ಸಂಗ್ರಹಿಸಲಾಗಿದ್ದು, ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ’ ಎಂದು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್‌ ಕುಮಾರ್‌ ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)