ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮೆಡ್‌ ಕೆ ಫಲಿತಾಂಶ: ಬೆಂಗಳೂರಿನ ರಿಷಬ್‌ ಅಡಿಗ ರಾಜ್ಯಕ್ಕೆ ಮೊದಲಿಗ

ಮೊದಲ 20ರಲ್ಲಿ ರಾಜ್ಯದ 7 ಮಂದಿಗೆ ರ‍್ಯಾಂಕ್‌–ಬೆಂಗಳೂರಿಗೆ ಸಿಂಹಪಾಲು
Last Updated 27 ಮೇ 2019, 14:56 IST
ಅಕ್ಷರ ಗಾತ್ರ

ಬೆಂಗಳೂರು: ಎಂಜಿನಿಯರಿಂಗ್‌ ಪದವಿ ಪ್ರವೇಶಕ್ಕಾಗಿ ಕಾಮೆಡ್‌ ಕೆ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ 20 ರ‍್ಯಾಂಕ್‌ ಪಡೆದವರ ಪೈಕಿ ರಾಜ್ಯದ 7 ಮಂದಿ ಸ್ಥಾನ ಪಡೆದಿದ್ದಾರೆ.

ಉತ್ತರ ಪ್ರದೇಶದ ಅಮಿತ್‌ ಕುಮಾರ್‌ ಪ್ರಥಮ ರ‍್ಯಾಂಕ್‌ (180ರಲ್ಲಿ 169 ಅಂಕ) ಗಳಿಸಿದ್ದರೆ, ಅದೇ ರಾಜ್ಯದ ಅಕ್ಷಯ್‌ ಕುಮಾರ್‌ ಚೌರಾಸಿಯಾ (168) 2ನೇ ರ‍್ಯಾಂಕ್‌ ಗಳಿಸಿದ್ದಾರೆ. ಆಂಧ್ರಪ್ರದೇಶದ ಮನುಬೋಲು ನಾರಾಯಣ್‌ ಶ್ರೀಹಿತ್‌ (166) 3ನೇ ರ್‍ಯಾಂಕ್‌ ಪಡೆದಿದ್ದಾರೆ.

165 ಅಂಕ ಗಳಿಸಿರುವ ಬೆಂಗಳೂರು ಬಿಟಿಎಂ ಲೇಔಟ್‌ನ ರಿಷಬ್‌ ಅಡಿಗ 4ನೇ ರ‍್ಯಾಂಕ್ ಗಳಿಸಿದ್ದಾರೆ. ರಾಜ್ಯದ ಟಾಪರ್‌ ಇವರೇ. ವಿಜಯನಗರ ಮೈಕೊ ಲೇಔಟ್‌ನ ಗಗನ್‌ ಹೆಗಡೆ (165) 5ನೇ ರ‍್ಯಾಂಕ್‌, ಗೊಟ್ಟಿಗೆರೆಯ ಎಂ.ಅಲೋಕ್‌ ಕೃಷ್ಣ (162) 7ನೇ ರ‍್ಯಾಂಕ್‌, ಮೈಸೂರು ಕುವೆಂಪುನಗರದ ಪಿ.ರಕ್ಷಿತ್‌ (161) 9ನೇ ರ‍್ಯಾಂಕ್‌ ಹಾಗೂ ಬೆಂಗಳೂರು ವಿಕ್ಟೋರಿಯಾ ಲೇಔಟ್‌ನ ಶಬರಿ ಎಸ್‌.ನಾಯರ್‌ (161) 10ನೇ ರ‍್ಯಾಂಕ್‌ ಗಳಿಸಿದ್ದಾರೆ.

ಪ್ರಥಮ 5 ಸಾವಿರರ‍್ಯಾಂಕ್‌ ವಿಜೇತರಲ್ಲಿ 1,144 ಮಂದಿ ಶೇ 70ಕ್ಕಿಂತ ಅಧಿಕ ಅಂಕ ಗಳಿಸಿದ್ದರೆ, ಉಳಿದವರು ಶೇ 58.33ರಿಂದ ಶೇ 70ರಷ್ಟು ಅಂಕ ಗಳಿಸಿದ್ದಾರೆ. ಮೊದಲ 100 ರ‍್ಯಾಂಕ್‌ ವಿಜೇತರಲ್ಲಿ ರಾಜ್ಯದ 37 ಮಂದಿ ಇದ್ದಾರೆ. 1000 ರ‍್ಯಾಂಕ್‌ ವಿಜೇತರಲ್ಲಿ 255 ಮಂದಿ ರಾಜ್ಯದವರು ಎಂದು ಕಾಮೆಡ್‌ ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಸ್‌.ಕುಮಾರ್‌ ತಿಳಿಸಿದ್ದಾರೆ.

www.comedk.org ವೆಬ್‌ಸೈಟ್‌ನಲ್ಲಿ ರ‍್ಯಾಂಕ್‌ ಕಾರ್ಡ್‌ ಲಭ್ಯ ಇದೆ. ಟ್ಯೂಷನ್‌ ಶುಲ್ಕ ಮತ್ತು ಕೌನ್ಸೆಲಿಂಗ್‌ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು.

ಮೇ 12ರಂದು ದೇಶದ 133 ನಗರಗಳ 248 ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆದಿತ್ತು. ನೋಂದಾಯಿತ 69,233 ಮಂದಿಯ ಪೈಕಿ 58,085 ಮಂದಿ ಪರೀಕ್ಷೆ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT