ಶನಿವಾರ, ಜುಲೈ 31, 2021
28 °C

ಕಾಮಿಡ್‌-ಕೆ ಪ್ರವೇಶ ಪರೀಕ್ಷೆ ಜುಲೈ 25ರಿಂದ ಆಗಸ್ಟ್‌ 1ಕ್ಕೆ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜುಲೈ 25ರಂದು ನಡೆಯಬೇಕಿದ್ದ ಕಾಮಿಡ್‌-ಕೆ ಪ್ರವೇಶ ಪರೀಕ್ಷೆಯನ್ನು ಆ.01ಕ್ಕೆ ಮುಂದೂಡಲಾಗಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಕಾಮಿಡ್‌-ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ, 'ಜುಲೈ 26ರಂದು ನೀಟ್‌ ಪರೀಕ್ಷೆ ಇದೆ. ಕಾಮಿಡ್‌-ಕೆ ಪರೀಕ್ಷೆ ಮುಗಿಸಿದ ಮರುದಿನವೇ ನೀಟ್‌ ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸುವುದು ಕಷ್ಟವಾಗಲಿದೆ ಎಂದು ಅಭ್ಯರ್ಥಿಗಳಿಂದ ಮನವಿಗಳು ಬಂದಿವೆ. ಆ ಹಿನ್ನೆಲೆಯಲ್ಲಿ ಜುಲೈ 25ಕ್ಕೆ ನಿಗದಿಪಡಿಸಲಾಗಿದ್ದ ಕಾಮಿಡ್‌-ಕೆ ಪರೀಕ್ಷೆಯನ್ನು ಆ.01ಕ್ಕೆ ಮುಂದೂಡಲಾಗಿದೆ' ಎಂದು ತಿಳಿಸಿದ್ದಾರೆ. 

ಈ ಮೊದಲು ಜೂನ್‌ 27ರಂದು ಕಾಮಿಡ್‌-ಕೆ ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿತ್ತು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜೂಲೈ 25ರಂದು ಪರೀಕ್ಷೆಯನ್ನು ಮುಂದೂಡಿ ಆದೇಶ ಹೊರಡಿಸಲಾಗಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು