ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆ

ಶನಿವಾರ, ಜೂಲೈ 20, 2019
28 °C

ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆ

Published:
Updated:

ಉಜಿರೆ: ಧರ್ಮಸ್ಥಳದ ಶಾಂತಿವನ ಟ್ರಸ್ಟ್‌ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ಆಶ್ರಯದಲ್ಲಿ 18ನೇ ವರ್ಷದ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆ ಆಯೋಜಿಸಲಾಗಿದೆ.

ಡ್ರಾಯಿಂಗ್ ಶೀಟ್ ಅಥವಾ ಅಂಚೆ ಕಾರ್ಡ್‌ನಲ್ಲಿ ಪೆನ್ಸಿಲ್, ಇಂಡಿಯನ್ ಇಂಕ್, ಜಲವರ್ಣ ಬಳಸಿ ಚಿತ್ರ ರಚಿಸಬಹುದು.

ಸ್ಪರ್ಧೆಯು ಪ್ರಾಥಮಿಕ ಶಾಲಾ ವಿಭಾಗ, ಪ್ರೌಢ ಶಾಲಾ ವಿಭಾಗ, ಕಾಲೇಜು ವಿಭಾಗ ಮತ್ತು ಸಾರ್ವಜನಿಕ ವಿಭಾಗಗಳಲ್ಲಿ ನಡೆಯಲಿದೆ. ವಿಷಯ: ಸಮುದ್ರ ಕಿನಾರೆ.

ಶಾಲಾ, ಕಾಲೇಜು ವಿಭಾಗದವರು ಸಂಸ್ಥೆಯ ಮುಖ್ಯಸ್ಥರ ಪ್ರಮಾಣ ಪತ್ರದೊಂದಿಗೆ ತಮ್ಮ ಪೂರ್ಣ ವಿಳಾಸ ಹಾಗೂ ದೂರವಾಣಿ ಸಂಖ್ಯೆಯೊಂದಿಗೆ ಇದೇ ಡಿಸೆಂಬರ್ 31 ರೊಳಗೆ ಚಿತ್ರಗಳನ್ನು ಕಳುಹಿಸಬೇಕು. ವಿಳಾಸ: ನಿರ್ದೇಶಕರು, ಅಂಚೆ-ಕುಂಚ ವಿಭಾಗ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ, ಧರ್ಮಸ್ಥಳ - 574 216. ವಿಜೇತರಿಗೆ ನಗದು ಬಹುಮಾನ, ಸ್ಮರಣಿಕೆ ಮತ್ತು ಪ್ರಮಾಣ ಪತ್ರ ನೀಡಲಾಗುವುದು ಎಂದು ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಶಶಿಕಾಂತ್ ಜೈನ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !