ಮಲೆ ಮಹದೇಶ್ವರ ದೇವಾಲಯ ಉಪ ಕಾರ್ಯದರ್ಶಿ ವಿರುದ್ಧ ದೂರು

7
ಎಸಿಬಿಗೆ ದೂರು ನೀಡಿದ ಬಿಜೆಪಿ ವಕ್ತಾರ

ಮಲೆ ಮಹದೇಶ್ವರ ದೇವಾಲಯ ಉಪ ಕಾರ್ಯದರ್ಶಿ ವಿರುದ್ಧ ದೂರು

Published:
Updated:

ಬೆಂಗಳೂರು: ‘ಮಲೆ ಮಹದೇಶ್ವರ ದೇವಾಲಯ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿಯಾಗಿ ಕಾನೂನುಬಾಹಿರವಾಗಿ ನೇಮಕಗೊಂಡಿರುವ ಎಂ. ಬಸವರಾಜು ಭಾರಿ ಅವ್ಯವಹಾರ ನಡೆಸುತ್ತಿದ್ದಾರೆ’ ಎಂದು ಆರೋಪಿಸಿ ನಗರ ಬಿಜೆಪಿ ವಕ್ತಾರ ಎನ್‌.ಆರ್‌. ರಮೇಶ್‌ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದಾರೆ.

ಎಡೆಯೂರು ಸಿದ್ಧಲಿಂಗೇಶ್ವರ ದೇವಾಲಯದಲ್ಲಿ ಅಧೀಕ್ಷಕರಾಗಿದ್ದ ಬಸವರಾಜು ಅವರನ್ನು ಹಿಂದಿನ ಸರ್ಕಾರ ಮಹದೇಶ್ವರ ದೇವಾಲಯ ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾಯಿಸಿತು. ಆನಂತರ ಅವರನ್ನು ಉಪ ಕಾರ್ಯದರ್ಶಿ ಆಗಿ ನೇಮಿಸಲಾಯಿತು. ಇದು ಹಿರಿಯ ಕೆಎಎಸ್‌ ಅಧಿಕಾರಿ ಶ್ರೇಣಿಯ ಹುದ್ದೆಯಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಬಸವರಾಜು ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯನವರ ಹಿಂದಿನ ಕ್ಷೇತ್ರ ವರುಣಾಕ್ಕೆ ಸೇರಿದವರಾದ್ದರಿಂದ ಅರ್ಹತೆಗೆ ಮೀರಿದ ಹುದ್ದೆ ನೀಡಲಾಗಿದೆ. ಮಹದೇಶ್ವರ ಬೆಟ್ಟದಲ್ಲಿ ಅವರು ಅಕ್ರಮ ನಡೆಸುತ್ತಿದ್ದಾರೆ. ಖರೀದಿಯಲ್ಲಿ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಹೇಳಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೂ ದೂರು ನೀಡಿದ್ದು, ಅವ್ಯವಹಾರ ಆರೋಪ ಕುರಿತು ವಿಚಾರಣೆ ನಡೆಸುವಂತೆ ರಮೇಶ್‌ ಒತ್ತಾಯಿಸಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !