ಕಾಂಗ್ರೆಸ್‌: ದೆಹಲಿಯಲ್ಲಿ ಸಚಿವ ಆಕಾಂಕ್ಷಿಗಳ ಲಾಬಿ ಚುರುಕು

7
ದೆಹಲಿಗೆ ದೌಡಾಯಿಸಿರುವ ಸಚಿವ ಸ್ಥಾನಾಕಾಂಕ್ಷಿಗಳು

ಕಾಂಗ್ರೆಸ್‌: ದೆಹಲಿಯಲ್ಲಿ ಸಚಿವ ಆಕಾಂಕ್ಷಿಗಳ ಲಾಬಿ ಚುರುಕು

Published:
Updated:

ನವದೆಹಲಿ: ಆಷಾಢದ ಕಾರಣ ಮುಂದಿರಿಸಿ ಸಚಿವ ಸಂಪುಟ ವಿಸ್ತರಣೆ ಮುಂದಕ್ಕೆ ಹಾಕಿರುವ ಪಕ್ಷದ ಹೈಕಮಾಂಡ್‌ ಗಮನ ಸೆಳೆಯುವ ನಿಟ್ಟಿನಲ್ಲಿ ರಾಷ್ಟ್ರ ರಾಜಧಾನಿಗೆ ದೌಡಾಯಿಸಿರುವ ಕಾಂಗ್ರೆಸ್‌ನ ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು, ವರಿಷ್ಠರ ಮನವೊಲಿಕೆ ಕಾರ್ಯದಲ್ಲಿ ತೊಡಗಿದ್ದಾರೆ.

ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಇತ್ತೀಚೆಗೆ ಅಜ್ಮೇರ್‌ ದರ್ಗಾ ಯಾತ್ರೆಗೆ ತೆರಳಿದ್ದ 10 ಜನ ಶಾಸಕರು ಭಾನುವಾರವೇ, ಸಚಿವರ ಜೊತೆ ದೆಹಲಿಗೆ ದೌಡಾಯಿಸಿ ಠಿಕಾಣಿ ಹೂಡಿದ್ದು, ತಮ್ಮ ಗುಂಪಿನವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಲಾಬಿ ನಡೆಸಿದ್ದಾರೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ, ಬೀದರ್‌ ಶಾಸಕ ರಹೀಂ ಖಾನ್‌ ಮತ್ತಿತರರು ಸಚಿವ ಜಾರಕಿಹೊಳಿ ನೇತೃತ್ವದಲ್ಲಿ ಸೋಮವಾರ ಸಂಜೆ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿ ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತ ಸಮುದಾಯದ ಖೋಟಾ ಅಡಿ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ.

ನವದೆಹಲಿಗೆ ಬಂದಿರುವ ಎಂ.ಬಿ. ಪಾಟೀಲ ಅವರೂ ಮಂಗಳವಾರ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಕೆ.ಸಿ. ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !