ಬುಧವಾರ, ಜನವರಿ 27, 2021
24 °C

ಸಿಂಧೂರಿ ವರ್ಗಾವಣೆಗೆ ಕಾಂಗ್ರೆಸ್‌ ಸಮರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿರುವುದು ಸರಿಯಾಗಿದೆ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಕಾರ್ಮಿಕ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಎಸ್‌.ಎಸ್‌. ಪ್ರಕಾಶಂ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೂರ್ನಾಲ್ಕು ವರ್ಷಗಳ ಹಿಂದೆ ಸದಸ್ಯರಾದವರನ್ನು ಈಗ ನಕಲಿಯಾಗಿ ಸದಸ್ಯರಾಗಿದ್ದಾರೆ ಎಂದು ಅವರ ಸದಸ್ಯತ್ವ ರದ್ದು ಮಾಡುತ್ತಿದ್ದಾರೆ. ಆಗ ಕಟ್ಟಡ ಕಾರ್ಮಿಕರಾಗಿದ್ದವರು ಕೆಲಸ ದೊರೆಯಲಿಲ್ಲ ಎಂದು ಈಗ ಬೇರೆ ಕೆಲಸ ಮಾಡುತ್ತಿರಬಹುದು. ಅದನ್ನು ಕಾರಣವಾಗಿಟ್ಟುಕೊಂಡು ಅವರ ಸದಸ್ಯತ್ವ ರದ್ದು ಮಾಡಲಾಗುತ್ತಿದೆ’ ಎಂದು ದೂರಿದರು.

* ಇದನ್ನೂ ಓದಿ: ಕಾರ್ಮಿಕ ನಿಧಿಗೆ ರಕ್ಷಣೆ: ರೋಹಿಣಿ ಸಿಂಧೂರಿಗೆ ‘ಶಿಕ್ಷೆ’‍

ಕಾರ್ಮಿಕರ ಮಕ್ಕಳಿಗೆ ನೀಡುವ ಶಿಷ್ಯವೇತನ ಬಿಡುಗಡೆ ಮಾಡಿರಲಿಲ್ಲ ಎಂದು ದೂರಿದರು. ನಕಲಿ ದಾಖಲೆ ಸಲ್ಲಿಸಿ ಕೆಲವರು ಸದಸ್ಯತ್ವ ಪಡೆಯುತ್ತಿರಲಿಲ್ಲವೇ? ಅದನ್ನು ತಡೆಯಲು ಹೋದದ್ದು ತಪ್ಪೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಲೋಪಗಳಾಗಿದ್ದರೆ ಸರಿಪಡಿಸಲಿ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಿ. ಅದು ಬಿಟ್ಟು ಅನುದಾನ ಬಿಡುಗಡೆ ಮಾಡಿದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು