ಮಂಗಳವಾರ, ಅಕ್ಟೋಬರ್ 15, 2019
27 °C
ಅಕ್ಟೋಬರ್‌ 8ಕ್ಕೆ ವಿಚಾರಣೆಗೆ ಹಾಜರಾಗಲು ಸೂಚನೆ

ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣಗೆ ಇ.ಡಿ. ನೋಟಿಸ್

Published:
Updated:

ತುಮಕೂರು: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಮಧುಗಿರಿಯ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ನೋಟಿಸ್ ನೀಡಿದೆ.

ಅಕ್ಟೋಬರ್ 8ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಿದೆ. ಸೆಪ್ಟೆಂಬರ್‌ 24ರಂದೇ ಇ.ಡಿ. ನೋಟಿಸ್ ನೀಡಿದೆ ಎನ್ನಲಾಗಿದೆ.

‘ಯಾವ ವಿಚಾರಕ್ಕೆ ಸಂಬಂಧಿಸಿ ವಿಚಾರಣೆ ಎಂದು ತಿಳಿಸಿಲ್ಲ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಒಡೆತನದ ‘ಹರ್ಷ ಶುಗರ್ಸ್‌’ಗೆ ಅಪೆಕ್ಸ್ ಬ್ಯಾಂಕ್ ₹ 300 ಕೋಟಿ ಸಾಲ ನೀಡಿದೆ. ಈ ಸಂಬಂಧ ವಿಚಾರಣೆಗೆ ಕರೆದಿರಬಹುದು ಎನಿಸುತ್ತದೆ’ ಎಂದು ರಾಜಣ್ಣ ತಿಳಿಸಿದರು.

Post Comments (+)