ಕಾಂಗ್ರೆಸ್‌ ಸಭೆಯಲ್ಲಿ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಚರ್ಚೆ

7

ಕಾಂಗ್ರೆಸ್‌ ಸಭೆಯಲ್ಲಿ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಚರ್ಚೆ

Published:
Updated:

ಬೆಂಗಳೂರು: ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತು ಕಾಂಗ್ರೆಸ್‌ ನಾಯಕರು ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿದರು 

ಸಭೆಯಲ್ಲಿ ಒಂದು ವಾರದಿಂದ ಕಾಂಗ್ರೆಸ್ ನಾಯಕರು ಕೊಟ್ಟ ಹೇಳಿಕೆಗಳನ್ನು ಸಚಿವರ ಗಮನಕ್ಕೆ ತಂದರು. ಶಾಂತಿವನದಲ್ಲಿ ಸಿದ್ದರಾಮಯ್ಯ ಮಾತನಾಡಿದ್ದು, ‘ಸಮಿಶ್ರ ಸರ್ಕಾರಕ್ಕೆ ಒಂದೇ ವರ್ಷ ಭವಿಷ್ಯ’ ಎಂಬ ಹೇಳಿಕೆ, ಬಜೆಟ್ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿರುವ ಬಗ್ಗೆ  ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಚರ್ಚೆ ನಡೆಸಿದರು.

‘ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳುವುದು ಅನಿವಾರ್ಯ. ಕಾಂಗ್ರೆಸ್ ಹೈಕಮಾಂಡ್ ರಾಷ್ಟ್ರದ ದೃಷ್ಟಿಯಿಂದ ಈ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಜೆಡಿಎಸ್‌ಗಿಂತ ಈ ಮೈತ್ರಿ ಕಾಂಗ್ರೆಸ್ ಗೆ ಅನಿವಾರ್ಯ. ಆದರೆ ನಮ್ಮ ನಾಯಕರು ಹೇಳಿಕೆ ಕೊಡುವುದನ್ನು ಬಿಡುತ್ತಿಲ್ಲ’ ಎಂದರು.

ಶೀಘ್ರವೇ ಅಧಿವೇಶನ ಆರಂಭವಾಗಲಿದೆ. ಸದನದಲ್ಲಿ ಒಗ್ಗಟ್ಟು ಪ್ರದರ್ಶಿಸುವ ಅವಶ್ಯಕತೆ ಇದೆ. ಹೀಗಾಗಿ ನಾವು ಒಟ್ಟಾಗಿ ಇರಬೇಕು ಎಂದು ಹೇಳಿದರು. 

ಮಾಜಿ ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಒಂದು ದಿನ ತೊಂದರೆ ಕೊಡಲಿಲ್ಲ. ಇಂತಹ ಸಂದರ್ಭದಲ್ಲಿ ಅವರು ಈ ರೀತಿ ನಡೆದುಕೊಳ್ಳುವುದು ತಪ್ಪು. ಅವರ ನಡೆಯನ್ನು ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದೆ. ನೀವು ಸಹ ಯಾರು ಸಿದ್ದರಾಮಯ್ಯ ಹೇಳಿಕೆ ಸಮರ್ಥಿಸಬೇಡಿ ಎಂದು ಪರಮೇಶ್ವರ್ ತಾಕೀತು ಮಾಡಿದರು.

ಸಭೆಗೆ ಹಾಜರಾದ ಸಚಿವರು
1. ಡಾ.ಜಿ. ಪರಮೇಶ್ವರ
2. ಡಿ.ಕೆ. ಶಿವಕುಮಾರ್
3. ಆರ್.ವಿ. ದೇಶಪಾಂಡೆ
4. ಪುಟ್ಟರಂಗ ಶೆಟ್ಟಿ
5. ಯು.ಟಿ. ಖಾದರ್
6.  ಪ್ರಿಯಾಂಕ್ ಖರ್ಗೆ
7. ಜಮೀರ್ ಅಹಮದ್
8. ಶಿವಾನಂದ್ ಪಾಟೀಲ್
9. ಶಂಕರ್
10. ರಾಜಶೇಖರ ಪಾಟೀಲ್ ಹುಮ್ನಾಬಾದ್
11. ವೆಂಕಟ ರಮಣಪ್ಪ
12. ಜಯಮಾಲ
13. ರಮೇಶ್ ಜಾರಕಿಹೊಳಿ
14.  ಕೃಷ್ಣ ಬೈರೇಗೌಡ
15.  ಶಿವಶಂಕರ್ ರೆಡ್ಡಿ
16.  ಕೆ.ಜೆ. ಜಾರ್ಜ್

ಪಕ್ಷದ ಬೆಳವಣಿಗೆಗಳನ್ನು ಕುರಿತು ಇನ್ನು ಮುಂದೆ ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್‌ ಮಾತ್ರ ಮಾತನಾಡಬೇಕು. ಉಳಿದವರು ಮಾತನಾಡಿ ಗೊಂದಲ ಸೃಷ್ಟಿಸದಂತೆ ಸಭೆಯಲ್ಲಿ ನಿರ್ಧರಿಸಲಾಯಿತು. 

*
ಪಕ್ಷವನ್ನು ಬಲಗೊಳಿಸಲು, ಉತ್ತಮ ಆಡಳಿತ ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
-ಯು.ಟಿ.ಖಾದರ್, ನಗರಾಭಿವೃದ್ಧಿ (ಬೆಂಗಳೂರು, ಬಿಬಿಎಂಪಿ ಹೊರತುಪಡಿಸಿ) ವಸತಿ ಸಚಿವ

*
ನಾನು ಯಾವ ವಿಚಾರವನ್ನು ಮಾತನಾಡಲ್ಲ. ಡಿಸಿಎಂ ಅವರೇ ಮಾತನಾಡುತ್ತಾರೆ.
- ಕೆ.ಜೆ.ಜಾರ್ಜ್, ಬೃಹತ್ ಕೈಗಾರಿಕೆ  ಸಚಿವ

*
ನಾನು ಮಾಧ್ಯಮದ ಮುಂದೆ ಮಾತನಾಡಲ್ಲ, ವರಿಷ್ಠರು ಎಲ್ಲಾ ವಿಚಾರ ಹೇಳುತ್ತಾರೆ.
- ಜಯಮಾಲಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !