ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಕಾಂಗ್ರೆಸ್‌ ನಾಯಕರಿಂದ ಆಮಿಷ

7
ಸಚಿವ ಸ್ಥಾನ ಆಕಾಂಕ್ಷಿ ಶಾಸಕರಿಗೆ ನಿಗಮ– ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ

ಸಚಿವ ಸ್ಥಾನ ಆಕಾಂಕ್ಷಿಗಳಿಗೆ ಕಾಂಗ್ರೆಸ್‌ ನಾಯಕರಿಂದ ಆಮಿಷ

Published:
Updated:

ಬೆಂಗಳೂರು: ಸಚಿವ ಸ್ಥಾನ ಆಕಾಂಕ್ಷಿ ಶಾಸಕರಿಗೆ ನಿಗಮ– ಮಂಡಳಿಯಲ್ಲಿ ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನ ನೀಡಿ ಸಂತೃಪ್ತಿ ಪಡಿಸಲು ಕಾಂಗ್ರೆಸ್‌ ನಾಯಕರು ಮುಂದಾಗಿದ್ದಾರೆ. ಆದರೆ, ಸಂಪುಟ ಸೇರಲು ತುದಿಗಾಲಲ್ಲಿ ನಿಂತಿರುವ ಶಾಸಕರ ಪೈಕಿ ಬಹುತೇಕ ಮಂದಿ ಈ ‘ಆಮಿಷ’ ಒಪ್ಪಿಕೊಳ್ಳಲು ಸಿದ್ಧರಿಲ್ಲ.

ಸಂಪುಟ ವಿಸ್ತರಣೆ ಬೆನ್ನಲ್ಲೇ ನಿಗಮ– ಮಂಡಳಿಗಳಿಗೆ ನೇಮಕ ಖಚಿತವಾಗಿದೆ. ಆ ಮೂಲಕ, ಸಂಪುಟ ಸೇರುವ ಅವಕಾಶ ಕೈ ತಪ್ಪಿದ ಶಾಸಕರು ಬಂಡಾಯ ಏಳದಂತೆ ತಡೆಯುವುದು ಕಾಂಗ್ರೆಸ್‌ ಉದ್ದೇಶ.

ಪಕ್ಷಕ್ಕೆ ಹಂಚಿಕೆಯಾಗಿರುವ 20 ನಿಗಮ ಮಂಡಳಿಗಳಲ್ಲಿ ‘ಆಯಕಟ್ಟಿನ’ 15 ನಿಗಮ-ಮಂಡಳಿಗೆ ಶಾಸಕರನ್ನು ನೇಮಿಸಲು ಕಾಂಗ್ರೆಸ್‌ ನಾಯಕರು ತೀರ್ಮಾನಿಸಿದ್ದಾರೆ. ಈ ಪೈಕಿ 12 ಹೆಸರನ್ನು ಅಂತಿಮಗೊಳಿಸಲಾಗಿದೆ ಎಂಬ ಮಾಹಿತಿ ಇದೆ.

ಈ ಪಟ್ಟಿಯಲ್ಲಿ ಶಾಸಕರಾದ ಎಸ್.ಟಿ. ಸೋಮಶೇಖರ್(ಯಶವಂತಪುರ), ಬೈರತಿ ಬಸವರಾಜ್(ಕೆ.ಆರ್.ಪುರ), ಬಿ.ಸಿ.ಪಾಟೀಲ(ಹಿರೇಕೆರೂರ), ಭೀಮಾ ನಾಯಕ್(ಹಗರಿಬೊಮ್ಮನಹಳ್ಳಿ), ರಾಮಪ್ಪ (ಹರಿಹರ), ಟಿ.ರಘುಮೂರ್ತಿ(ಚಳ್ಳಕೆರೆ), ಅಖಂಡ 
ಶ್ರೀನಿವಾಸಮೂರ್ತಿ (ಪುಲಕೇಶಿನಗರ), ರಹೀಂ ಖಾನ್‌ (ಬೀದರ್‌ ಉತ್ತರ), ಶಿವರಾಮ ಹೆಬ್ಬಾರ್ (ಯಲ್ಲಾಪುರ ), ಆರ್‌. ನರೇಂದ್ರ (ಹನೂರು) ಹಾಗೂ ಪಕ್ಷೇತರರಾದ ನಾಗೇಶ (ಮುಳಬಾಗಿಲು) ಹೆಸರು ಇದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಆದರೆ, ಈ ಪೈಕಿ ಕೆಲವು ಶಾಸಕರು, ‘ಸಚಿವ ಸ್ಥಾನ ಸಿಗದಿದ್ದರೂ ಅಡ್ಡಿ ಇಲ್ಲ. ನಿಗಮ– ಮಂಡಳಿ ಮಾತ್ರ ಬೇಡ’ ಎಂಬ ನಿಲುವಿಗೆ ಬದ್ಧರಾಗಿರಲು ನಿರ್ಧರಿಸಿದ್ದಾರೆ. ಕೆಲವರು, ಈ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !