ಕಾಂಗ್ರೆಸ್‌ ಪ್ರತಿಭಟನೆ ಇಂದು

7

ಕಾಂಗ್ರೆಸ್‌ ಪ್ರತಿಭಟನೆ ಇಂದು

Published:
Updated:

ಮಂಗಳೂರು: ರಾಷ್ಟ್ರಪತಿ ಮಹಾತ್ಮಗಾಂಧಿ ಅವರ ಸಾವನ್ನು ಸಂಭ್ರಮಿಸಿರುವ ಹಿಂದೂ ಮಹಾಸಭಾದ ಕೃತ್ಯವನ್ನು ಖಂಡಿಸಿ ರಾಜ್ಯದಾದ್ಯಂತ ಸೋಮವಾರ(ಫೆ. 4) ಪ್ರತಿಭಟನೆ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು. 

‘ಮಹಾತ್ಮರು ಹುತಾತ್ಮರಾದ ದಿನ (ಜನವರಿ 30) ಹಿಂದೂ ಮಹಾಸಭಾ ಅವರ ಸಾವನ್ನು ಸಂಭ್ರಮಿಸಿದೆ.

ಈ ಸಮಯದಲ್ಲಿ ಆ ಸಂಘಟನೆಯ ನಾಯಕಿ ಗಾಂಧೀಜಿಯವರ ಪ್ರತಿಕೃತಿಗೆ ಗುಂಡಿಕ್ಕಿ ವಿಕೃತಿ ಮೆರೆದಿದ್ದಾಳೆ’ ಎಂದು ಅವರು ಕಿಡಿಕಾರಿದರು.

ಹಿಂದೂ ಮಹಾಸಭಾ ಮಾಡುತ್ತಿರುವ ಕೆಲಸಗಳಿಗೆ ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿಯವರ ಬೆಂಬಲವಿದೆ. ಈ ಕಾರಣದಿಂದಾಗಿಯೇ ಆ ಸಂಘಟನೆ ಬಹಿರಂಗವಾಗಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ತಕ್ಷಣವೇ ಹಿಂದೂ ಮಹಾಸಭಾ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !