ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಮಾಡಿದ್ದು 15 ಜನರ ₹3.5 ಲಕ್ಷಕೋಟಿ ಸಾಲಮನ್ನಾ- ರಾಹುಲ್‌

Last Updated 18 ಮಾರ್ಚ್ 2019, 11:01 IST
ಅಕ್ಷರ ಗಾತ್ರ

ಕಲಬುರ್ಗಿ: ಮೋದಿ ಭರವಸೆ ನೀಡಿದ್ದಂತೆ ನಿಮಗೆ ₹15 ಲಕ್ಷ ದೊರೆಯಿತೇ ಎಂದು ರಾಹುಲ್‌ ಗಾಂಧಿ ಜನರನ್ನು ಪ್ರಶ್ನಿಸಿದರು.ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಇಲ್ಲಿನ ನೂತನ ವಿಶ್ವವಿದ್ಯಾಲಯ ಮೈದಾನದಲ್ಲಿ ಸೋಮವಾರ ನಡೆದಪರಿವರ್ತನಾ ರ್‍ಯಾಲಿಯಲ್ಲಿ ಮಾತನಾಡಿದರು.

ಹದಿನೈದು ಜನರ ₹3.5 ಲಕ್ಷ ಕೋಟಿ ಸಾಲವನ್ನು ಮೋದಿ ಮನ್ನಾ ಮಾಡಿದ್ದಾರೆ. ನಾವು ರೈತರ ಕೃಷಿ ಸಾಲ ಮನ್ನಾ ಮಾಡುತ್ತೇವೆ. ಅದೂ ಕರ್ನಾಟಕದಲ್ಲಿ ಮಾತ್ರವಲ್ಲದೆ, ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಸಾಲಮನ್ನಾ ಮಾಡಿದ್ದೇವೆ. ನಾವು ಭರವಸೆ ನೀಡಿದ್ದನ್ನು ಮಾಡಿದ್ದೇವೆ. ನಾವು ಹೇಳಿದ್ದನ್ನು ಮಾಡುವವರೆಗೂ ಅದರ ಬಗ್ಗೆ ಗಮನಹರಿಸುತ್ತೇವೆ. ಉದ್ಯೋಗ ಅವಕಾಶಗಳನ್ನು ನಿರ್ಮಿಸುವುದಾಗಿ ಹೇಳಿದ್ದ ಮೋದಿ ಮಾಡಿದ್ದೇನು ಎಂದರು.

’ಕಳೆದ 45 ವರ್ಷಗಳಲ್ಲಿಯೇ ಅಧಿಕ ನಿರುದ್ಯೋಗ ಸಮಸ್ಯೆಯನ್ನು ಭಾರತ ಇಂದು ಎದುರಿಸುತ್ತಿದೆ. ನಮ್ಮ ಇತಿಹಾಸದಲ್ಲಿ ಯಾರೊಬ್ಬರೂ ಉದ್ಯೋಗ ಅವಕಾಶಗಳನ್ನು ತಪ್ಪಿಸಿರಲಿಲ್ಲ. ನೋಟು ರದ್ಧತಿಯ ಮೂಲಕ ರೈತರು, ಕೃಷಿ ಕಾರ್ಮಿಕರನ್ನುಬ್ಯಾಂಕ್‌ಗಳ ಮುಂದೆ ನಿಲ್ಲುವಂತೆ ಮಾಡಿದರು. ಕಳ್ಳರು ಬ್ಯಾಂಕ್‌ಗಳ ಹಿಂದಿನ ಬಾಗಿಲಿನಿಂದಿ ಒಳನುಸುಳಿ ಅವರ ಕಪ್ಪು ಹಣವನ್ನು ಅಧಿಕೃತಗೊಳಿಸಿಕೊಂಡರು’ ಎಂದು ಆರೋಪಿಸಿದರು.

ಮತ್ತೆ ಗಬ್ಬರ್‌ ಸಿಂಗ್‌ ಟ್ಯಾಕ್ಸ್‌(ಜಿಎಸ್‌ಟಿ) ಜಾರಿಗೆ ತರುವ ಮೂಲಕ ಲಕ್ಷಾಂತರ ಸಣ್ಣ ಉದ್ಯಮಗಳ ಮೇಲೆ ದುಷ್ಪರಿಣಾಮ ಉಂಟು ಮಾಡಲಾಯಿತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಸರಿಯಾದ ಜಿಎಸ್‌ಟಿಯನ್ನು ನಿಮಗೆ ಒಗಿಸುತ್ತೇವೆ, ಅದು ಐದು ಹಂತಗಳನ್ನು ಒಳಗೊಂಡಿರುವುದಿಲ್ಲ. ನೀವು ಈಗಾಗಲೇ ಅನುಭವಿಸಿರುವ ನಷ್ಟಕ್ಕೆ ನಾವು ಏನನ್ನೂ ಮಾಡಲಾಗುವುದಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಇಂಥದ್ದನ್ನು ನೀವು ಅನುಭವಿಸದಂತೆ ನಾವು ಭರವಸೆ ನೀಡುತ್ತೇವೆ ಎಂದು ಹೇಳಿದರು.

ಕರ್ನಾಟಕದಲ್ಲಿ ಮೈತ್ರಿ ಪಕ್ಷಗಳು ಜತೆಯಾಗಿ ಹೋರಾಟ ನಡೆಸುತ್ತಿವೆ. ರೈತರ ಸಾಲಮನ್ನಾ ಈಡೇರಿಸಿದ್ದೇವೆ. ಆದರೆ, ನಾವು ಸಾಲಮನ್ನಾ ಮಾಡಿಲ್ಲ ಎಂದು ಮೋದಿ ನಿಮ್ಮ ಮುಂದೆ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಪ್ರತಿ ವರ್ಷ ಬೆಳೆಗಳ ಮೇಲಿನ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಯನ್ನು ಹೆಚ್ಚಿಸಿದ್ದೆವು. ಆದರೆ, ಮೋದಿ ನೀವೇ ವಿಮೆ ಪಾವತಿಸುವಂತೆ ಮಾಡಿ, ಇಡೀ ಜಿಲ್ಲೆಗಳನ್ನು ಖಾಸಗಿ ವಲಯಕ್ಕೆ ನೀಡಿದರು. ನೀವು ವಿಮೆಯ ಪ್ರೀಮಿಯಂ ಪಾವತಿಸುತ್ತಿದ್ದೀರಿ ಹಾಗೂ ಆ ಎಲ್ಲ ಹಣವನ್ನು ಹದಿನೈದು ಜನ ಪಡೆದುಕೊಳ್ಳುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT