ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯರನ್ನು ಕಡೆಗಣಿಸಿದರೆ ಕಾಂಗ್ರೆಸ್ ಪಕ್ಷ ಸೊನ್ನೆ: ಕೆ.ಎನ್.ರಾಜಣ್ಣ

Last Updated 2 ಅಕ್ಟೋಬರ್ 2019, 19:00 IST
ಅಕ್ಷರ ಗಾತ್ರ

ತುಮಕೂರು: ’ಸಿದ್ದರಾಮಯ್ಯ ಅವರಂತಹ ಜನನಾಯಕರು ಕಾಂಗ್ರೆಸ್ ಪಕ್ಷಕ್ಕೆ ಅವಶ್ಯ. ಅವರನ್ನು ಕಡೆಗಣಿಸಿದರೆ ಕಾಂಗ್ರೆಸ್ ಪಕ್ಷ ‘ಸೊನ್ನೆ’ ಆಗುತ್ತದೆ’ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಎಚ್ಚರಿಕೆ ನೀಡಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ‘ಕೆಲವರು ಲಾಬಿ ನಡೆಸಿ ಲೀಡರ್ ಆಗಲು ಹೊರಟಿ
ದ್ದಾರೆ. ಅಂಥವರಿಗೆ ಚುನಾವಣೆಗಳಲ್ಲಿ ಹತ್ತು ಮತ ಹಾಕಿಸುವ ಯೋಗ್ಯತೆಯೂ ಇರುವುದಿಲ್ಲ' ಎಂದರು.

'ಉದಾಹರಣೆಗೆ ನಮ್ಮ ಜಿಲ್ಲೆಯವನು ವಿರೋಧ ಪಕ್ಷದ ನಾಯಕನಾಗಲು ಹೊರಟಿದ್ದಾನೆ. ಅವನೇನಾದರೂ ವಿರೋಧ ಪಕ್ಷದ ನಾಯಕನಾದರೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸಮಾಧಿಯಾಗುತ್ತದೆ' ಎಂದು ಡಾ.ಜಿ.ಪರಮೇಶ್ವರ ವಿರುದ್ಧಪರೋಕ್ಷವಾಗಿಏಕ ವಚನದಲ್ಲಿಯೇ ವಾಗ್ದಾಳಿ ನಡೆಸಿದರು.

’ಅನರ್ಹ ಶಾಸಕರ ಮನನೊಯಿಸಿದರೆ ಬಿಜೆಪಿಗೆ ಶಾಪ ತಟ್ಟಲಿದೆ. ಬಿಜೆಪಿ ಸರ್ಕಾರ ಬಂದಿರೋದೆ ಅವರಿಂದ. ಅವರಿಗೆ ನೋವು ಮಾಡುವ ಪ್ರಯತ್ನ ಬಿಜೆಪಿಯವರು ಮಾಡಬಾರದು. ಗೌರವಯುತವಾಗಿ ನಡೆಸಿಕೊಳ್ಳಬೇಕು. ಅವರಿಗೆ ನೀಡಿದ ಆಶ್ವಾಸನೆಗಳನ್ನು ಉಳಿಸಿಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT