ಸಿದ್ದರಾಮಯ್ಯ ಯೂಟರ್ನ್‌

7
ವಿಡಿಯೊಗೂ ನನಗೂ ಸಂಬಂಧ ಇಲ್ಲ

ಸಿದ್ದರಾಮಯ್ಯ ಯೂಟರ್ನ್‌

Published:
Updated:
ಸಿದ್ದರಾಮಯ್ಯ

ಬೆಂಗಳೂರು: ‘ನಾನು ಸರ್ಕಾರದ ವಿರುದ್ಧ ಇದ್ದೇನೆ ಎಂಬುದು ಸುಳ್ಳು. ಇತ್ತೀಚೆಗೆ ಬಿಡುಗಡೆಯಾದ ವಿಡಿಯೊಗಳಿಗೂ ನನಗೂ ಸಂಬಂಧ ಇಲ್ಲ’ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಧರ್ಮಸ್ಥಳ ಸಮೀಪದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆಗೆ ದಾಖಲಾಗಿದ್ದ ಸಿದ್ದರಾಮಯ್ಯ, ಬಜೆಟ್ ಮಂಡನೆ ಹಾಗೂ ಸರ್ಕಾರದ ಐದು ವರ್ಷ ಇರುತ್ತದೆಯೇ ಎಂಬ ಬಗ್ಗೆ  ತಮ್ಮ ಆಪ್ತರೊಂದಿಗೆ ಚರ್ಚಿಸಿದ್ದಾರೆನ್ನಲಾದ ವಿಡಿಯೊಗಳು ವೈರಲ್ ಆಗಿದ್ದವು. ಇದಾದ ನಂತರ ನಡೆದ ಬೆಳವಣಿಗೆಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸ ಒದಗಿಸಿತ್ತು. ಚಿಕಿತ್ಸೆ ಪಡೆದು ಗುರುವಾರವಷ್ಟೇ ಶಾಂತಿವನದಿಂದ ಹೊರಬಂದಿದ್ದ ಅವರು, ಮಾಧ್ಯಮದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದರು. ಅವರ ಮೌನ ಅನೇಕ ಅರ್ಥಗಳಿಗೆ ಕಾರಣವಾಗಿದ್ದವು.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಯಾವ ಸಂದರ್ಭದಲ್ಲಿ ಮಾತನಾಡಿದ್ದೇನೆ ಅನ್ನೋದು ನಿಮಗೆ ಗೊತ್ತಿಲ್ಲ. ನಾನು ಸಹಜವಾಗಿ ಮಾತನಾಡಿದ್ದನ್ನು ರೆಕಾರ್ಡ್ ಮಾಡಿ ಪ್ರಸಾರ ಮಾಡಿದ್ದಾರೆ. ಇದು ಕಿಡಿಗೇಡಿಗಳ ಕೃತ್ಯ. ಲೋಕಾಭಿರಾಮವಾಗಿ ಮಾತನಾಡಿದ್ದನ್ನು ಹಿಂದೆ ಮುಂದೆ ಕಟ್ ಮಾಡಿ ತೋರಿಸಿದ್ದು ಅನೈತಿಕ ಅಲ್ವೇ’ ಎಂದು ಪ್ರಶ್ನಿಸಿದರು.

 ಈ ವಿಡಿಯೊ ಬಗ್ಗೆ ಸಭೆಯಲ್ಲೂ ಕಾಂಗ್ರೆಸ್‌ ಮುಖಂಡರಿಗೆ ಸಮಜಾಯಿಷಿ ನೀಡಿದರು. ‘ಸುಮ್ಮನೆ ಮಾತಾಡಿದ್ದನ್ನು ವಿವಾದ ಮಾಡಿದ್ದಾರೆ. ಈ ವಿಷಯವನ್ನು ಮಾಧ್ಯಮದವರು ದೊಡ್ಡದು ಮಾಡಿದರು. ಅಲ್ಲಿದ್ದವರನ್ನು ಚೆಕ್‌ ಮಾಡಿ ಅಂತ ನಾನೇ ಹೇಳಿ ಬಂದಿದ್ದೇನೆ’ ಎಂದು ಸ್ಪಷ್ಟನೆ ನೀಡಿದರು.

ಬರಹ ಇಷ್ಟವಾಯಿತೆ?

 • 10

  Happy
 • 2

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !