ಟ್ರೈನಿ ಪಿಎಸ್‌ಐ ಸಾವು: ₹59 ಲಕ್ಷ ನೆರವು ನೀಡಲು ಮುಂದಾದ ಪ್ರಶಿಕ್ಷಣಾರ್ಥಿಗಳು

7

ಟ್ರೈನಿ ಪಿಎಸ್‌ಐ ಸಾವು: ₹59 ಲಕ್ಷ ನೆರವು ನೀಡಲು ಮುಂದಾದ ಪ್ರಶಿಕ್ಷಣಾರ್ಥಿಗಳು

Published:
Updated:

ಕಲಬುರ್ಗಿ: ನಗರದಲ್ಲಿ ಭಾನುವಾರ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪಿಎಸ್‌ಐ ಪ್ರಶಿಕ್ಷಣಾರ್ಥಿ ಬಸವರಾಜ ಶಂಕರಪ್ಪ ಮಂಚನೂರು (30) ಕುಟುಂಬಕ್ಕೆ ಸಹ ಪ್ರಶಿಕ್ಷಣಾರ್ಥಿಗಳು ₹59 ಲಕ್ಷ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ.

‘590 ಪ್ರಶಿಕ್ಷಣಾರ್ಥಿಗಳು ತಲಾ ₹10 ಸಾವಿರದಂತೆ ಆರ್ಥಿಕ ನೆರವು ನೀಡಲು ಒಪ್ಪಿಕೊಂಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಸೇಡಂ ತಾಲ್ಲೂಕು ಬೆನಕನಹಳ್ಳಿಯ ಬಸವರಾಜ ಅವರು ನಗರ ಹೊರವಲಯದ ನಾಗನಹಳ್ಳಿಯಲ್ಲಿರುವ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ತರಬೇತಿ ಪಡೆಯುತ್ತಿದ್ದರು. 9 ತಿಂಗಳು ತರಬೇತಿ ಪೂರ್ಣಗೊಂಡಿದ್ದು, ಇನ್ನೆರಡು ತಿಂಗಳು ಬಾಕಿ ಇತ್ತು.

ನಗರದ ರಾಮ ಮಂದಿರ ವೃತ್ತದಲ್ಲಿರುವ ಗ್ರ್ಯಾಂಡ್ ಸೆಂಟ್ರಲ್ ಕಾಂಪ್ಲೆಕ್ಸ್ ಎದುರು ಭಾನುವಾರ ಬೆಳಿಗ್ಗೆ ಅನುಮಾನಾಸ್ಪದ ರೀತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 5

  Sad
 • 0

  Frustrated
 • 1

  Angry

Comments:

0 comments

Write the first review for this !