ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಬಂದರಿನಲ್ಲಿ ‘ಕೊರೊನಾ’ ಮೀನು!

Last Updated 14 ಮಾರ್ಚ್ 2020, 20:07 IST
ಅಕ್ಷರ ಗಾತ್ರ

ಮಂಗಳೂರು: ಕೊರೊನಾ ವೈರಸ್ ಭೀತಿ ನಡುವೆಯೇ ಮಂಗಳೂರು ಬಂದರಿನಲ್ಲಿ ‘ಕೊರೊನಾ’ ಮೀನು ಕಾಣಿಸಿಕೊಂಡಿದೆ.

ಬಲು ಅಪರೂಪದ ಜಾತಿಗೆ ಸೇರಿದ ಭಾರಿ ಮೌಲ್ಯದ ಮೀನು ಇದಾಗಿದ್ದು, ಮೀನುಗಾರರಿಗೆ ಲಾಭ ತಂದುಕೊಟ್ಟಿದೆ. ಇದರ ವೈಜ್ಞಾನಿಕ ಹೆಸರು ಮೆಲನೊಟಿನಿಯಾ ಕೊರೊನಾ (Melanotaenia corona).

ಪ್ರಸಕ್ತ ಮೀನುಗಾರಿಕಾ ಋತು ಮೀನುಗಾರರ ಪಾಲಿಗೆ ಆಶಾದಾಯಕವಾಗಿಲ್ಲ. ಸಮುದ್ರದಲ್ಲಿ ಮೀನಿನ ಕ್ಷಾಮ ಎದುರಾಗಿದ್ದು, ಈ ನಡುವೆ ಭಾರಿ ಮೌಲ್ಯದ ಮೀನು ಬಲೆಗೆ ಬಿದ್ದು ಕೊಂಚ ನಿಟ್ಟಿಸಿರು ಬಿಡುವಂತಾಗಿದೆ.

ಈ ಮೀನಿಗೆ ಕರಾವಳಿ ಭಾಗದಲ್ಲಿ ಬೇಡಿಕೆ ಕಡಿಮೆಯಾದರೂ, ಗುಜರಾತ್ ಸೇರಿದಂತೆ ಬೇರೆ ರಾಜ್ಯಗಳಿಗೆ ಕಳುಹಿಸಲಾಗುತ್ತದೆ. ಅಪರೂಪದ ಜಾತಿಗೆ ಸೇರಿದ ‘ಕೊರೊನಾ’ ಮೀನು ಕೆ.ಜಿ.ಗೆ ₹1,800 ರಿಂದ ₹2 ಸಾವಿರ ದರ ಹೊಂದಿದೆ. ಇದರ ವೈಜ್ಞಾನಿಕ ಹೆಸರು ಮೀನುಗಾರರಿಗೆ ತಿಳಿದಿಲ್ಲವಾದರೂ ಕೊರೊನಾ ಭೀತಿ ಮಧ್ಯೆ ಬಂದರಿನಲ್ಲಿ ‘ಕೊರೊನಾ’ ಮೀನಿನದ್ದೇ ಸುದ್ದಿ ಹೆಚ್ಚಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT