ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ಗೆ ಕಲಬುರ್ಗಿ ಜಿಲ್ಲೆಯಲ್ಲಿ 4ನೇ ಬಲಿ

Last Updated 21 ಏಪ್ರಿಲ್ 2020, 3:39 IST
ಅಕ್ಷರ ಗಾತ್ರ

ಕಲಬುರ್ಗಿ: ಕೋವಿಡ್ 19 ಕಾಯಿಲೆಗೆ ಸೋಮವಾರ ಬೆಳಿಗ್ಗೆ 80 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಇದರಿಂದ ಮೃತಪಟ್ಟವರ ಸಂಖ್ಯೆ ‌ನಾಲ್ಕಕ್ಕೇರಿದಂತಾಗಿದೆ.

ಮೂರು ವರ್ಷಗಳಿಂದ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧನಿಗೆ ಜ್ವರ ‌ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ರಾತ್ರಿ ಅವರ ವರದಿ ಬಂದಿದ್ದು, ಕೋವಿಡ್ 19 ಪಾಸಿಟಿವ್ ಇರುವುದು ಗೊತ್ತಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ‌ಬಿ.ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

ಮಾರ್ಚ್ 9ರಂದು ನಗರದ ಕೆ ಎನ್ ಝಡ್ ಫಂಕ್ಷನ್ ಹಾಲ್ ಬಳಿಯ‌ 76 ವರ್ಷದ ಮೊಹಮ್ಮದ್ ಹುಸೇನ್ ಸಿದ್ದಿಕಿ ಅವರು ಕೋವಿಡ್ ಗೆ ಬಲಿಯಾಗಿದ್ದರು‌. ಕಾಕತಾಳೀಯವೆಂದರೆ 80 ವರ್ಷದ ವೃದ್ಧನಂತೆ ಸಿದ್ದಿಕಿ ಅವರ ವೈದ್ಯಕೀಯ ವರದಿಯೂ ಅವರು ‌ಸಾವಿಗೀಡಾದ‌ ನಂತರವೇ ‌ಬಂದಿತ್ತು.

ಏಪ್ರಿಲ್ 7ರಂದು 65 ವರ್ಷದ ಹಣ್ಣಿನ ವ್ಯಾಪಾರಿ, ಏಪ್ರಿಲ್ 13 ರಂದು 55 ವರ್ಷದ ಬಟ್ಟೆ ವ್ಯಾಪಾರಿ ಈ ಸೋಂಕಿಗೆ ಬಲಿಯಾಗಿದ್ದಾರೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 27 ಕೋವಿಡ್ ‌ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT