ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಮತ್ತೆ 12 ಜನರಿಗೆ ಕೋವಿಡ್-19 ದೃಢ

Last Updated 17 ಏಪ್ರಿಲ್ 2020, 7:40 IST
ಅಕ್ಷರ ಗಾತ್ರ

ಮೈಸೂರು: ಮೈಸೂರಿನಲ್ಲಿ ಒಂದೇ ದಿನ 12 ಕೋವಿಡ್-19ದೃಢಪಟ್ಟದ್ದು, ನಂಜನಗೂಡಿನ 10 ಜನರಿಗೆ, ಮೈಸೂರಿನ ಇಬ್ಬರಿಗೆ ಸೋಂಕುತಗುಲಿದೆ.

ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟು 73ಕ್ಕೇರಿದೆ. ನಂಜನಗೂಡಿನ ಔಷಧ ಕಾರ್ಖಾನೆಗೆ ಸಂಬಂಧಿಸಿದ ಪೀಡಿತರ ಸಂಖ್ಯೆಯೇ 60 ದಾಟಿದೆ.

ಔಷಧ ಕಾರ್ಖಾನೆಗೆ ಸಂಬಂಧಿಸದ ಮಹಿಳೆಗೆ ಕೋವಿಡ್ ತಗುಲಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ಕಾರ್ಖಾನೆಯ ಮೊದಲ ರೋಗಿ ಸಂಪರ್ಕಿತ 11 ಜನರಿಗೆ ಕೋವಿಡ್ ದೃಢಪಟ್ಟಿದೆ.

***
ಮಳವಳ್ಳಿಯ ಮತ್ತೆ ಮೂವರಲ್ಲಿ ಕೋವಿಡ್ 19
ಮಂಡ್ಯ:
ಮಳವಳ್ಳಿಯ ಮತ್ತೆ ಮೂವರಲ್ಲಿ ಕೋವಿಡ್ 19 ದೃಢಪಟ್ಟಿದ್ದು, ಜಿಲ್ಲೆಯಲ್ಲಿಒಟ್ಟು ರೋಗಿಗಳ ಸಂಖ್ಯೆ 11ಕ್ಕೇರಿದೆ.

ದೆಹಲಿ ಮೂಲದ ಧರ್ಮಗುರುಗಳ ಸಂಪರ್ಕಕ್ಕೆ ಬಂದಿದ್ದ 25, 29, 40 ವರ್ಷ ವಯಸ್ಸಿನ ಮೂವರಲ್ಲಿ ರೋಗ ಪತ್ತೆಯಾಗಿದೆ.

**
ವಿಜಯಪುರ: ಮತ್ತಿಬ್ಬರಿಗೆ ಕೋವಿಡ್‌ 19 ದೃಢ
ವಿಜಯಪುರದ ಮತ್ತಿಬ್ಬರಿಗೆ ಕೋವಿಡ್–19 ಇಂದು ದೃಢವಾಗಿದೆ. 221ನೇ ರೋಗಿ ಸಂಪರ್ಕದಿಂದ 6 ವರ್ಷ ಬಾಲಕ ಹಾಗೂ 28 ವರ್ಷ ಮಹಿಳೆಗೆ ಸೋಂಕು ತಗುಲಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT