ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಮತಿ ಪಡೆಯದೇ, ತಪಾಸಣೆಗೂ ಒಳಪಡದೆ ಮದರಸಾದಲ್ಲಿ ವಾಸ: ಪೊಲೀಸರಿಂದ ಥಳಿತ

Last Updated 27 ಮಾರ್ಚ್ 2020, 12:49 IST
ಅಕ್ಷರ ಗಾತ್ರ

ಬಾಗಲಕೋಟೆ: ಅನುಮತಿ ಪಡೆಯದೇ ಹಾಗೂ ಆರೋಗ್ಯ ತಪಾಸಣೆಗೂ ಒಳಪಡದೇ ಮುಧೋಳ ನಗರದ ಮದರಸಾದಲ್ಲಿ ಉಳಿದಿದ್ದ ದೆಹಲಿ ಮೂಲದ 22 ಮಂದಿ ಧರ್ಮ ಬೋಧಕರಿಗೆ ಪೊಲೀಸರು ಶುಕ್ರವಾರ ಥಳಿಸಿದ್ದಾರೆ.

ನಂತರ ಎಲ್ಲರನ್ನೂ ಅಲ್ಲಿಯೇ ಕ್ವಾರೆಂಟೈನ್ ಗೆ (ಪ್ರತ್ಯೇಕ ವಾಸ) ಒಳಪಡಿಸಿದ್ದಾರೆ.

ಮುಧೋಳ ನಗರದ ಸಾಯಿ ನಗರದಲ್ಲಿರುವೆ ಮದರಸಾಗೆ ತಿಂಗಳ ಹಿಂದೆ ಧರ್ಮ ಬೋಧನೆಗಾಗಿ ಇವರೆಲ್ಲರೂ ದೆಹಲಿಯಿಂದ ಬಂದಿದ್ದರು. ಎಲ್ಲರೂ ಒಟ್ಟಿಗೆ ವಾಸವಿದ್ದರು.

ಸ್ಥಳೀಯರು ನೀಡಿದ ದೂರು ಆಧರಿಸಿ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರ ತಂಡ ಅಲ್ಲಿಗೆ ತೆರಳಿತ್ತು.

ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪು ಗುಂಪಾಗಿ ವಾಸವಾಗಿದ್ದನ್ನು ಕಂಡು ಎಲ್ಲರನ್ನೂ ಕರೆಸಿ ಪ್ರಶ್ನಿಸಿ ಥಳಿಸಲಾಯಿತು.

ನಂತರ ವೈದ್ಯರನ್ನು ಕರೆಸಿ ಎಲ್ಲರನ್ನೂ ತಪಾಸಣೆಗೆ ಒಳಪಡಿಸಿದ್ದಾರೆ. ಹೊರಗೆ ಬಾರದಂತೆ ಎಲ್ಲರಿಗೂ ತಹಶಿಲ್ದಾರ್ ತಾಕೀತು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT