ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ಕೊರೊನಾ ಸೋಂಕು ದೃಢ: ರೋಗಿ ಇದ್ದ ಪ್ರದೇಶದ ಸುತ್ತ ನಿಷೇಧ

Last Updated 19 ಮಾರ್ಚ್ 2020, 9:12 IST
ಅಕ್ಷರ ಗಾತ್ರ

ಮಡಿಕೇರಿ: ಸೋಂಕು ದೃಢ ಪಟ್ಟ ವ್ಯಕ್ತಿ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಹೋಬಳಿ ಕೊಂಡಂಗೇರಿಯ ಕುತ್ತಿಮಟ್ಟೆಯ ಮನೆಯಲ್ಲಿ ಒಂದು ದಿನ ವಾಸ್ತವ್ಯ ಮಾಡಿದ್ದು ಗೊತ್ತಾಗಿದೆ.

ಈ ಪ್ರದೇಶದಲ್ಲಿ 500 ಮೀಟರ್ ನಿಷೇಧಿತ ಪ್ರದೇಶ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಘೋಷಣೆ ಮಾಡಿದ್ದಾರೆ.

5 ಕಿ.ಮೀ. ವ್ಯಾಪ್ತಿಯನ್ನು ಸೂಕ್ಷ್ಮ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ನಿರ್ಬಂಧಿತ ಪ್ರದೇಶದಲ್ಲಿ 75 ಮನೆಗಳಿದ್ದು 305 ಮಂದಿಗೆ ಮನೆಯಿಂದ ಹೊರಬಾರದಂತೆ ನಿರ್ಬಂಧ ಹೇರಲಾಗಿದೆ. ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ. ಅಲ್ಲಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗುವುದು ಎಂದು ಡಿಸಿ ಮಾಹಿತಿ ನೀಡಿದರು.

ಟ್ರಾವೆಲ್ ಹಿಸ್ಟರಿ: ದುಬೈನಿಂದ ಈ ವ್ಯಕ್ತಿ ಇದೇ 15ರಂದು ಇಂಡಿಗೊ ವಿಮಾನದಲ್ಲಿ ಬೆಂಗಳೂರಿಗೆ ಬಂದು ಅಲ್ಲಿಂದ ಮಡಿಕೇರಿಯ ಮೂರ್ನಾಡಿಗೆ 16ರ ಬೆಳಿಗ್ಗೆ ಮೈಸೂರು ಮಾರ್ಗವಾಗಿ ರಾಜಹಂಸ ಬಸ್‌ ನಲ್ಲಿ ಬಂದಿದ್ದಾರೆ. ಬೆಂಗಳೂರಿನ ಸೆಟಲೈಟ್ ಬಸ್ ನಿಲ್ದಾಣದಿಂದ ಬಸ್ ಏರಿದ್ದಾರೆ.ಸಂಚಾರ ಮಾಡಿದ ರಾಜಹಂಸ ಬಸ್ ಪತ್ತೆ ಮಾಡಲಾಗಿದೆ. ಆ ಬಸ್ ಅನ್ನು ವಾಶ್ ಮಾಡಿಸಲಾಗಿದೆ. ಆ ಬಸ್‌ನಲ್ಲಿ ಬಂದವರಿಗೆ ರೋಗ‌ ಲಕ್ಷಣ ಕಂಡುಬಂದರೆ ಮಾಹಿತಿ ನೀಡುವಂತೆ ಕೋರಲಾಗಿದೆ. ಮಾರ್ಗ ಮಧ್ಯದಲ್ಲಿ ಹೋಟೆಲ್‌ನಲ್ಲಿ ಈ ವ್ಯಕ್ತಿ ‌ಊಟ ಸಹ‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT