ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದಲ್ಲಿ ಲಾಕ್‌ಡೌನ್, ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ?: ಚಿತ್ರಗಳಲ್ಲಿ ನೋಡಿ

Last Updated 3 ಏಪ್ರಿಲ್ 2020, 10:35 IST
ಅಕ್ಷರ ಗಾತ್ರ
ADVERTISEMENT
""
""
""
""
""
""
""

ಬೆಂಗಳೂರು: ಕೊರೊನಾ ವೈರಸ್ ಸೋಂಕು (ಕೋವಿಡ್–19) ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ದೇಶದಾದ್ಯಂತ ಘೋಷಿಸಲಾಗಿರುವ ಲಾಕ್‌ಡೌನ್‌ ರಾಜ್ಯದಲ್ಲಿಯೂ ಜಾರಿಯಲ್ಲಿದೆ. ರಾಜ್ಯದ ವಿವಿಧೆಡೆ ಈ ವಾರ ಕಂಡುಬಂದ ಕೆಲವು ಚಿತ್ರಗಳು ಇಲ್ಲಿವೆ:

ಲಾಕ್‌ಡೌನ್‌ ಹಿನ್ನಲೆಯಲ್ಲಿ ಅತಂತ್ರರಾಗಿರುವ ಕಾರ್ಮಿಕರು ಟೆಂಟ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಬೆಂಗಳೂರಿನ ಸಿಲ್ಕ್‌ಬೋರ್ಡ್‌ ಬಳಿ ಶುಕ್ರವಾರ ಕಂಡು ಬಂತು

ಹೊಟ್ಟೆ ಪಾಡು... ಬೆಳಗಾವಿಯಲ್ಲಿ ವ್ಯಕ್ತಿಯೊಬ್ಬರು ಬೈಸಿಕಲ್‌ನಲ್ಲಿ ಸೌದೆಗಳೊಂದಿಗೆ ಮಕ್ಕಳನ್ನೂ ಕರೆದುಕೊಂಡು ಹೋಗುತ್ತಿದ್ದ ದೃಶ್ಯ ಲಾಕ್‌ಡೌನ್‌ನ ಪರಿಣಾಮಗಳನ್ನು ಬಿಂಬಿಸುವಂತಿತ್ತು. ಚಿತ್ರ: ಏಕನಾಥ ಅಗಸಿಮನಿ

ಹುಬ್ಬಳ್ಳಿಯಲ್ಲಿ ಲಾಕ್ ಡೌನ್ ಘೋಷಣೆ ಹಿನ್ನೆಲೆಯಲ್ಲಿ ಗುರುವಾರ ಚನ್ನಮ್ಮ ವೃತ್ತದಲ್ಲಿ ಲಾರಿಯಲ್ಲಿ ಕಾರ್ಮಿಕರು ಹೊಗುತ್ತಿರುವ ದೃಶ್ಯ ಚಿತ್ರ: ತಾಜುದ್ದೀನ್‌ ಆಜಾದ್‌

ಸಂತೆಪೇಟೆಯಲ್ಲಿ ಪಾರಿವಾಳಗಳ ಸಂತೆ... ಮೈಸೂರಿನ ಸಂತೆ ಪೇಟೆಯಲ್ಲಿ ಈಗ ಜನರ ಸಂತೆಯ ಬದಲಾಗಿ ಪಾರಿವಾಳಗಳು ಸಂತೆ ಕಟ್ಟಿವೆ. ಲಾಕ್‌ಡೌನ್‌ನಿಂದ ಇಲ್ಲಿ ಈಗ‌ ಮೊದಲಿನಷ್ಟು ಜನಜಂಗುಳಿ ಇಲ್ಲ. ಇದರ ಪರಿಣಾಮವೊ ಏನೋ ಪಾರಿವಾಳಗಳು ಸಾಮೂಹಿಕವಾಗಿ‌ ಇಲ್ಲಿ ಚೆಲ್ಲಿದ್ದ‌ ಕಾಳುಗಳನ್ನು‌ ಮೆಲ್ಲುತ್ತಿದ್ದ ದೃಶ್ಯ ಗುರುವಾರ ಕಂಡು ಬಂತು. ಚಿತ್ರ:ಬಿ.ಆರ್.ಸವಿತಾ

ಮಂಗಳೂರಿನಲ್ಲಿ ಬುಧವಾರ ನಿರ್ಬಂಧ ಸಡಿಲಿಕೆ ಅವಧಿಯಲ್ಲಿ ದಟ್ಟಣೆ ಇರಲಿಲ್ಲ

ಲಾಕ್‌ಡೌನ್‌ನಿಂದ ಬೆಂಗಳೂರಿನ ಮೈಸೂರು ರಸ್ತೆಯ ಶಿರಸಿ ಸರ್ಕಲ್‌ಗೆ ಸ್ಥಳಾಂತರಗೊಂಡಿದ್ದ ಕೆ ಆರ್‌ ಮಾರುಕಟ್ಟೆಯಲ್ಲಿ ಗುರುವಾರ ರಾಮನವಮಿ ಖರೀದಿಗೆ ಬಂದಿದ್ದ ಜನರು.

ಲಾಕ್‌ಡೌನ್‌ ಪರಿಣಾಮ ನಗರದಲ್ಲಿ ಜನರ ಸಂಚಾರ ಅತ್ಯಂತ ವಿರಳವಾಗಿದೆ. ಯಾವುದೇ ಹೋಟೆಲ್, ಅಂಗಡಿಗಳು ತೆರದಿಲ್ಲ. ಇದರ ಪರಿಣಾಮ ಬೀದಿನಾಯಿಗಳಿಗೆ ಆಹಾರ ಸಿಗದೇ ಪರದಾಡುತ್ತಿವೆ. ಇದನ್ನು ಗಮನಿಸಿ ಕಾರವಾರದ ಸಂಚಾರ ಠಾಣೆ ಪೊಲೀಸರು ಮತ್ತು ಕೆಲವು ನಾಗರಿಕರು ಬಿಸ್ಕತ್ತು, ತಿಂಡಿಗಳನ್ನು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT